ADVERTISEMENT

ಕಾಲುವೆಗೆ ಬಿದ್ದ ಕಾರು: ಹುಬ್ಬಳ್ಳಿಯ‌‌ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 19:19 IST
Last Updated 21 ಜುಲೈ 2025, 19:19 IST
ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಕೌತಾಳಂ ಸಮೀಪದ ಕಾಲುವೆಗೆ ಬಿದ್ದಿದ್ದ ಕಾರನ್ನು ಕ್ರೇನ್‌ ನೆರವಿನಿಂದ ಹೊರಗೆ ತೆಗೆಯಲಾಯಿತು
ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಕೌತಾಳಂ ಸಮೀಪದ ಕಾಲುವೆಗೆ ಬಿದ್ದಿದ್ದ ಕಾರನ್ನು ಕ್ರೇನ್‌ ನೆರವಿನಿಂದ ಹೊರಗೆ ತೆಗೆಯಲಾಯಿತು   

ರಾಯಚೂರು: ಮಂತ್ರಾಲಯಕ್ಕೆ ಬಂದು ಹುಬ್ಬಳ್ಳಿಗೆ ಮರಳುವಾಗ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆ ಕೌತಾಳಂ ಮಂಡಳದ ಎರಗೇರಿ ಗ್ರಾಮದ ಬಳಿ ತುಂಗಭದ್ರಾ ಕಾಲುವೆಗೆ ಕಾರು ಉರುಳಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ.  

ಹುಬ್ಬಳ್ಳಿಯ ಸುನೀಲ್‌ (21) ಮೃತರು. ಮಣಿಕಂಠ (22) ಅವರು ಮುಳುಗಿರುವ ಶಂಕೆ ಇದೆ. ಅಭಿಷೇಕ, ಅಂಪಾಯ, ಹೈದರ್ ಹಾಗೂ ಮಂಜುನಾಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಸ್ತೆ ಮಧ್ಯ ನಾಯಿ ಅಡ್ಡ ಬಂದಿದೆ. ಅಪಘಾತ ತಪ್ಪಿಸುವ ಯತ್ನದಲ್ಲಿ ಕಾರು ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ಕ್ರೇನ್‌ ನೆರವಿನಿಂದ ಕಾರು ಹೊರಗೆ ತೆಗಿಸಿ ನಾಲ್ವರ ರಕ್ಷಣೆ ಮಾಡಲಾಯಿತು. ಕೌತಾಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.