ADVERTISEMENT

ರಾಯಚೂರು | ಸಮೀಕ್ಷೆಯ ಜಾತಿ ಕಾಲಂನಲ್ಲಿ ಗಾಣಿಗ ಎಂದೇ ನಮೂದಿಸಿ: ಲೋಣಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 6:58 IST
Last Updated 17 ಸೆಪ್ಟೆಂಬರ್ 2025, 6:58 IST
ರಾಯಚೂರಿನ ಕನ್ನಡ ಭವನದಲ್ಲಿ ರಾಯಚೂರು ಜಿಲ್ಲಾ ಗಾಣಿಗ ಸಂಘದ ವತಿಯಿಂದ ನಡೆದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ -2025 ಜಾತಿ ಗಣತಿಯ ಜಾಗೃತಿ ಸಭೆಯನ್ನು ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಉದ್ಘಾಟಿಸಿದರು
ರಾಯಚೂರಿನ ಕನ್ನಡ ಭವನದಲ್ಲಿ ರಾಯಚೂರು ಜಿಲ್ಲಾ ಗಾಣಿಗ ಸಂಘದ ವತಿಯಿಂದ ನಡೆದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ -2025 ಜಾತಿ ಗಣತಿಯ ಜಾಗೃತಿ ಸಭೆಯನ್ನು ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಉದ್ಘಾಟಿಸಿದರು   

ರಾಯಚೂರು: ‘ಗಾಣಿಗರ ಒಳಪಂಗಡ ಏನೇ ಇರಲಿ ನಾವು ಜಾತಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಗಾಣಿಗ ಉಪಜಾತಿ ಕಾಲಂನಲ್ಲಿ ಗಾಣಿಗ ಎಂದು ನಮೂದಿಸಬೇಕು’ ಎಂದು ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮನವಿ ಮಾಡಿದರು.

ನಗರದ ಕನ್ನಡ ಭವನದಲ್ಲಿ ರಾಯಚೂರು ಜಿಲ್ಲಾ ಗಾಣಿಗ ಸಂಘದ ವತಿಯಿಂದ ನಡೆದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ -2025 ಜಾತಿ ಗಣತಿಯ ಜಾಗೃತಿ ಸಭೆಯನ್ನು ಉದ್ಘಾಟಸಿ ಅವರು ಮಾತನಾಡಿದರು.

‘ಗಾಣಿಗ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ತೀರ ಹಿಂದುಳಿದಿದೆ. ಇಂತಹ ಸಮಾಜಕ್ಕೆ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಪ್ರಗತಿಗಾಗಿ ಹಲವು  ಹೋರಾಟಗಳು ನಡೆದ ಮೇಲೆ ಹಾವನೂರು ಅವರ ಹಿಂದುಳಿದ ಆಯೋಗದ ವರದಿ ಅನುಷ್ಠಾನವಾದ ನಂತರ 1993ರಲ್ಲಿ 2ಎ ಜಾರಿಗೆ ಬಂದಿದೆ’ ಎಂದು ತಿಳಿಸಿದರು.

ADVERTISEMENT

‘2ಎ ವರ್ಗದಿಂದ ತೆಗೆದು ಹಾಕಲು ಹಲವು ದಿನಗಳಿಂದ ಹುನ್ನಾರ ನಡೆದಿದೆ. ಸಮಾಜದ ಬಂಧುಗಳು ಈಗಾಗಲೇ ಎಚ್ಚೆತ್ತುಕೊಳ್ಳಬೇಕು ಕಾಂತರಾಜು ವರದಿಯಲ್ಲಿ ಗಾಣಿಗರ ಸಂಖ್ಯೆ ವಿರಳ ತೋರಿಸಲಾಗಿದೆ. ನಾವು ಎಲ್ಲ ಒಳಪಂಗಡಗಳನ್ನು ಮರೆತು  ಸಮೀಕ್ಷೆಯಲ್ಲಿ ನಮ್ಮ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಪರಿಸ್ಥಿತಿ ಗಳನ್ನು ನಿಖರವಾಗಿ ನಮೂದಿಸಬೇಕು‘ ಎಂದು ಹೇಳಿದರು.

ಕಲಬುರಗಿ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಚೆನ್ನಪ್ಪ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು.

ಅಣ್ಣಾರಾವ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿ. ಎಂ ಕತ್ನಾಳ, ಬಿ. ಎಂ. ಪಾಟೀಲ,ಎನ್. ಎ. ಕೊಂಡಗೂಳಿ, ತಾಲ್ಲೂಕು ಗಾಣಿಗ ಸಮಾಜದ ಅಧ್ಯಕ್ಷರಾದ ಬಸಪ್ಪ ಹಳ್ಳಿ, ಉಮೇಶ ಸಜ್ಜನ್, ಅಚ್ಚ ವಿರೂಪಾಕ್ಷಿ, ಬಸವರಾಜ ಸಜ್ಜನ್, ಶರಣಪ್ಪ, ಶಿವಕುಮಾರ ಸಜ್ಜನ್, ಸಿದ್ದನಗೌಡ ಪಾಟೀಲ, ಪ್ರಭುಲಿಂಗ ಸಜ್ಜನ್, ಮಹಿಳಾ ಘಟಕದ  ಅಧ್ಯಕ್ಷೆ ಲಕ್ಷ್ಮಿ ರಕ್ಕಸಗಿ, ಶಕುಂತಲಾ ಪಾಟೀಲ ಉಪಸ್ಥಿತರಿದ್ದರು. ಉಮಾಶಂಕರ ಸಜ್ಜನ್ ಸ್ವಾಗತಿಸಿದರು. ವೀರೇಶ ಕಮಲಾಪುರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.