ADVERTISEMENT

ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:13 IST
Last Updated 19 ಡಿಸೆಂಬರ್ 2019, 9:13 IST
ಮಸ್ಕಿ ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಬುಧವಾರ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು
ಮಸ್ಕಿ ತಾಲ್ಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಬುಧವಾರ ಚನ್ನಮಲ್ಲ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು   

ಮಸ್ಕಿ: ಲಿಂಗೈಕ್ಯ ಚನ್ನಮಲ್ಲ‌ ಶಿವಯೋಗಿಗಳ 64 ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಮಸ್ಕಿ ತಾಲ್ಕೂಕಿನ ಮೆದಕಿನಾಳ ಗ್ರಾಮದಲ್ಲಿ ಪೂರ್ಣ ಕುಂಭ ಹಾಗೂ ಭಾವಚಿತ್ರದ ಮೆರವಣಿಗೆ ಡಾ.‌ಚನ್ನಮಲ್ಲ‌ ಸ್ವಾಮಿಗಳ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ಗಂಗಾ ಸ್ಥಳದಿಂದ ಆರಂಭಗೊಂಡ ಪೂರ್ಣಕುಂಭದ ಮೆರವಣಿಗೆ ಪ್ರಮುಖ‌ ಬೀದಿಗಳಲ್ಲಿ ನಡೆಯಿತು

ಗ್ರಾಮದ‌ ಮಹಿಳೆಯರು ಪೂರ್ಣ ಕುಂಭ ಹಾಗೂ ಕಳಸದೊಂದಿಗೆ ಪಾಲ್ಗೊಂಡಿದ್ದರು. ಡೊಳ್ಳು ಕುಣಿತ ಸೇರಿ ವಿವಿಧ ಜಾನಪದ ಕಲಾ ತಂಡಗಳು ‌ಗಮನ ಸೆಳೆದವು.

ADVERTISEMENT

ಚನ್ನಮಲ್ಲ ಶಿವಯೋಗಿಗಳ ಮಠದಲ್ಲಿನ ಕರ್ತೃ ಗದ್ದುಗೆಗೆ ಗಂಗಾ ಸ್ಥಳದಿಂದ ಪೂರ್ಣ ಕುಂಭದಲ್ಲಿ ತರಲಾಗಿದ್ದ ಜಲ‌ದಿಂದ ಅಭಿಷೇಕ ಮಾಡಲಾಯಿತು. ವಿವಿಧ ಧಾರ್ಮಿಕ ಪೂಜಾ‌ ಕಾರ್ಯಕ್ರಮಗಳು‌ ಜರುಗಿದವು.

ಭಕ್ತರಿಗೆ ಅನ್ನ‌ಸಂತರ್ಪಣೆ ಏರ್ಪಡಿಸಲಾಗಿತ್ತು.‌ ಸಂಜೆ ಪ್ರವಚನ ಮಂಗಲ‌ ನಡೆಯಿತು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು, ಜನ ಪ್ರತಿನಿಧಿಗಳು ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.