ADVERTISEMENT

ಬಾಲ್ಯ ವಿವಾಹ ತಡೆಯುವಲ್ಲಿ ಜನರ ಸಹಕಾರ ಅಗತ್ಯ: ಸಿವಿಲ್ ನ್ಯಾಯಾಧೀಶ ಎಚ್.ಆನಂದ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:38 IST
Last Updated 25 ಡಿಸೆಂಬರ್ 2025, 5:38 IST
ಕವಿತಾಳ ಸಮೀಪದ ಬಾಗಲವಾಡದಲ್ಲಿ ಈಚೆಗೆ ನಡೆದ ಕಾನೂನು–ಅರಿವು ನೆರವು ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಎಚ್. ಆನಂದ ಕೊಣ್ಣೂರು ಮಾತನಾಡಿದರು
ಕವಿತಾಳ ಸಮೀಪದ ಬಾಗಲವಾಡದಲ್ಲಿ ಈಚೆಗೆ ನಡೆದ ಕಾನೂನು–ಅರಿವು ನೆರವು ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಎಚ್. ಆನಂದ ಕೊಣ್ಣೂರು ಮಾತನಾಡಿದರು   

ಕವಿತಾಳ: ‘ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಪಾಲಕರು, ಸಾರ್ವಜನಿಕರು, ಸಂಘ–ಸಂಸ್ಥೆಗಳು ಬಾಲ್ಯ ವಿವಾಹ ತಡೆಯುವಲ್ಲಿ ಸಹಕರಿಸಬೇಕು’ ಎಂದು ಸಿವಿಲ್ ನ್ಯಾಯಾಧೀಶ ಎಚ್.ಆನಂದ ಕೊಣ್ಣೂರು ಹೇಳಿದರು.

ಮಾನ್ವಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ನ್ಯಾಯವಾದಿಗಳ ಸಂಘ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಸಮೀಪದ ಬಾಗಲವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರ ಮದುವೆ ಮಾಡಿಕೊಳ್ಳಲು ಅರ್ಹತೆ ಪಡೆಯುತ್ತಾರೆ. ಬಾಲ್ಯ ವಿವಾಹ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದರು.

ADVERTISEMENT

ತಾಲ್ಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ, ಯಲ್ಲಪ್ಪ ವಕೀಲ, ಬಿ.ಕೆ. ಅಮರೇಶಪ್ಪ ವಕೀಲ, ತಿಪ್ಪಣ್ಣ ವಕೀಲ ಮಾತನಾಡಿದರು.

ವಕೀಲರಾದ ಅರ್ಚನಾ ಯಾದವ, ಸ್ಟೇಲ್ಲಾ ಶಾರ್ಲೆಟ್, ಚಂದ್ರಕಲಾ, ಶಾಂಭವಿ, ಶ್ರೀದೇವಿ ಬಡಿಗೇರ, ಅಮೃತಾ, ಮಹಾಂತಮ್ಮ ಪಾಟೀಲ, ಶಕೀಲ್, ಶಿವಪ್ಪ ನಾಯಕ, ನಾಗರಾಜ, ಯಲ್ಲಪ್ಪ ಕೋನಾಪುರಪೇಟೆ, ಚನ್ನನಗೌಡ, ಮಲ್ಲಿಕಾರ್ಜುನ ಪಾಟೀಲ, ಅಯ್ಯಪ್ಪ ನಾಯಕ, ಎ.ಎನ್. ರಾಜಾ, ಉಮೇಶ ಪಾಟೀಲ, ಮಲ್ಲಿಕಾರ್ಜುನ ಮೇಟಿ, ಪಂಪಾಪತಿ, ಶಶಿಕಾಂತಯ್ಯ ಸ್ವಾಮಿ, ಕೆ.ಬಿ. ಬಸವರಾಜ, ಶ್ರೀನಿವಾಸ ನಂದಿಹಾಳ, ಬಸವರಾಜ ಅರೋಲಿ, ಹನುಮೇಶ ಜೀನೂರ, ಹನುಮೇಶ ಕವಿತಾಳ, ಭರತ್ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.