
ಕವಿತಾಳ: ‘ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉತ್ತಮ ವೇದಿಕೆಯಾಗಿದೆ’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಸಮೀಪದ ಹಾಲಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಂದು ಉತ್ತಮ ಅವಕಾಶ. ಅದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.
ಭರತ ನಾಟ್ಯ, ಭಕ್ತಿಗೀತೆ, ರಸ ಪ್ರಶ್ನೆ, ರಂಗೋಲಿ ಬಿಡಿಸುವುದು, ಛದ್ಮವೇಶ, ಚಿತ್ರಕಲೆ, ಕಥೆ ಹೇಳುವುದು, ಮಿಮಿಕ್ರಿ, ಪ್ರಬಂಧ ರಚನೆ, ಭಾವಗೀತೆ ಸೇರಿದಂತೆ ವಿವಿಧ ಚಟವಟಿಕೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಸಂಭ್ರಮಿಸಿದರು.
ಚಂದ್ರಮೌಳೇಶ್ವರ ತಾತ ಮತ್ತು ದಂಡಗುಂಡಪ್ಪ ತಾತ ಜಂಗಮರಹಳ್ಳಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ವೆಂಕಟರಡ್ಡಿಗೌಡ, ಪಂಪಾಪತಿ ಹೂಗಾರ, ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಬಲವಂತರಾಯ ಗೌಡ, ಕರಿಯಪ್ಪ ಹಾಲಾಪುರು, ಜಗಧೀಶ್ಚಂದ್ರ ಸ್ವಾಮಿ, ಕರಿಯಪ್ಪ ಬೆಂಗಳೂರು, ಮೈಬುಬ್ ಸಾಬ್, ಮಂಜುನಾಥ ಪಾಟೀಲ, ಪ್ರಶಾಂತಕುಮಾರ ಪಾಟೀಲ, ಚನ್ನವಿರ ಜೋತನ, ಅರವಿಂದ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.