ADVERTISEMENT

ಲಿಂಗಸುಗೂರು: ನಿಗದಿತ ಹೆಲಿಪ್ಯಾಡ್‌ನಲ್ಲಿ ಇಳಿಯದ ಸಿಎಂ ಹೆಲಿಕಾಪ್ಟರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 18:01 IST
Last Updated 8 ಫೆಬ್ರುವರಿ 2026, 18:01 IST
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ಇಳಿಯಿತು
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಹೊರವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ಇಳಿಯಿತು   

ಲಿಂಗಸುಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದ ಹೆಲಿಕಾಪ್ಟರ್‌ ನಿಗದಿತ ಹೆಲಿಪ್ಯಾಡ್‌ ಬದಲಾಗಿ ಮತ್ತೊಂದು ಹೆಲಿಪ್ಯಾಡ್‌ನಲ್ಲಿ ಭಾನುವಾರ ಇಳಿದಿದ್ದು, ಗೊಂದಲಕ್ಕೆ ಕಾರಣವಾಯಿತು.

ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಅವರ ಪುತ್ರನ ಮದುವೆಗಾಗಿ ಮುಖ್ಯಮಂತ್ರಿ ಬರುತ್ತಿದ್ದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರಿಗೆ ಪ್ರತ್ಯೇಕ ಹೆಲಿಪ್ಯಾಡ್‌ ನಿಗದಿಪಡಿಸಲಾಗಿತ್ತು.

ಆದರೆ, ಪೈಲಟ್‌ ಗೊಂದಲಕ್ಕೆ ಒಳಗಾಗಿ ಮುಖ್ಯಮಂತ್ರಿ ಅವರು ಇದ್ದ ಹೆಲಿಕಾಪ್ಟರ್ ಅನ್ನು ಸತೀಶ ಜಾರಕಿಹೊಳಿ ಅವರಿದ್ದ ಹೆಲಿಕಾಪ್ಟರ್‌ಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್‌ನಲ್ಲಿ ಇಳಿಸಿದ್ದಾರೆ. ಇದರಿಂದ ಜಾರಕಿಹೊಳಿ ಅವರಿದ್ದ ಹೆಲಿಕಾಪ್ಟರ್‌ನ ಪೈಲಟ್ ಗೊಂದಲಕ್ಕೆ ಒಳಗಾಗಿದ್ದಾರೆ.  ಬಳಿಕ ಅದನ್ನು ಮುಖ್ಯಮಂತ್ರಿ ಹೆಲಿಕಾಪ್ಟರ್‌ಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್‌ನಲ್ಲಿ ಇಳಿಸಲಾಯಿತು. ಕೆಲಕಾಲ ಅಧಿಕಾರಿಗಳು ಇದರಿಂದಾಗಿ ಗೊಂದಲಕ್ಕೆ ಒಳಗಾದರು.

ADVERTISEMENT

ಸ್ವಾಗತಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬಾರದಿರುವುದಕ್ಕೆ ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಅಧಿಕಾರಿಗಳು ಧಾವಿಸುವಷ್ಟರಲ್ಲಿ ಸಿ.ಎಂ ಅವರಿದ್ದ ಕಾರು ಮದುವೆ ನಡೆಯುವ ಸ್ಥಳಕ್ಕೆ ತೆರಳಲು ಹೆಲಿಪ್ಯಾಡ್‌ ಬಳಿಯಿಂದ ನಿರ್ಗಮಿಸಿತ್ತು.