ADVERTISEMENT

ಮುದಗಲ್ | ಹೆಚ್ಚಿನ ಬಾಡಿಗೆ ವಸೂಲಿ: ಪುರಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 7:37 IST
Last Updated 10 ಜುಲೈ 2025, 7:37 IST
ಮುದಗಲ್ ಮೊಹರಂ ಹಬ್ಬದ ನಿಮಿತ್ತ ಕೋಟೆ ಮುಂಭಾಗದಲ್ಲಿ ಹಾಕಿರುವ ಅಂಗಡಿಗಳ ಭೂ ಬಾಡಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವುದನ್ನು ವಿರೋಧಿಸಿ ವ್ಯಾಪಾರಸ್ಥರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು
ಮುದಗಲ್ ಮೊಹರಂ ಹಬ್ಬದ ನಿಮಿತ್ತ ಕೋಟೆ ಮುಂಭಾಗದಲ್ಲಿ ಹಾಕಿರುವ ಅಂಗಡಿಗಳ ಭೂ ಬಾಡಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವುದನ್ನು ವಿರೋಧಿಸಿ ವ್ಯಾಪಾರಸ್ಥರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು   

ಮುದಗಲ್: ಮೊಹರಂ ನಿಮಿತ್ತ ಕೋಟೆ ಮುಂಭಾಗದಲ್ಲಿ ಹಾಕಿರುವ ಅಂಗಡಿಗಳ ಭೂಬಾಡಿಗೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವುದನ್ನು ವಿರೋಧಿಸಿ ವ್ಯಾಪಾರಸ್ಥರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮಖ್ಯಾಧಿಕಾರಿಗೆ ಮುತ್ತಿಗೆ ಹಾಕಿ ಟೆಂಡರ್‌ದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯ ಹಾಗೂ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಆಗಮಿಸಿ ಅಂಗಡಿಗಳು ಹಾಕಿದ್ದೇವೆ. ಭೂ ಬಾಡಿಗೆ ವಸೂಲಿಗಾಗಿ ಟೆಂಡರ್ ಪಡೆದ ಟೆಂಡರ್‌ದಾರ ಸರ್ಕಾರದ ನಿಯಮದಂತೆ ವಸೂಲಿ ಮಾಡುತ್ತಿಲ್ಲ. ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ₹3,000, ₹5000 ವಸೂಲಿ ಮಾಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದರು.

‘ಕಳೆದ ವರ್ಷದಂತೆ ಹಣ ಪಡೆಯಲು ಸೂಚಿಸಬೇಕು. ಹೆಚ್ಚಿನ ಹಣ ನೀಡಬೇಕು ಎಂದು ಟೆಂಡರ್‌ದಾರ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಬಸಪ್ಪ ಶಿರೂರ, ಗುಂಡಪ್ಪ ಸೇರಿದಂತೆ ಇನ್ನಿತರರು ಅಳಲು ತೋಡಿಕೊಂಡರು.

ADVERTISEMENT

‘ಆದೇಶದಂತೆ ಭೂಬಾಡಿಗೆ ವಸೂಲಿ ಮಾಡಲು ಟೆಂಡರ್‌ದಾರರಿಗೆ ಸೂಚಿಸುತ್ತೇನೆ. ಆದೇಶ ಮೀರಿದರೆ ಟೆಂಡರ್‌ ರದ್ದುಗೊಳಿಸಿ, ಸೂಕ್ತ ಕ್ರಮ ಜರುಗಿಸುತ್ತೇನೆ’ ಎಂದು ಮುಖ್ಯಾಧಿಕಾರಿ ಪ್ರವೀಣ ಬೋಗರ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.