ADVERTISEMENT

ವಿದ್ಯುತ್ ಕಡಿತ: ಕಂಪ್ಯೂಟರ್ ತರಗತಿಯೇ ಸ್ಧಗಿತ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 12:51 IST
Last Updated 6 ಜೂನ್ 2023, 12:51 IST
ಸಮೀಪದ ಯಲಗಟ್ಟಾ ಸಕರ್ಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ನಿರುಪಯುಕ್ತವಾಗಿ ಬಿದ್ದಿರುವ ಕಂಪ್ಯ್ಯೂಟರ್ಗಳು.   
ಸಮೀಪದ ಯಲಗಟ್ಟಾ ಸಕರ್ಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ನಿರುಪಯುಕ್ತವಾಗಿ ಬಿದ್ದಿರುವ ಕಂಪ್ಯ್ಯೂಟರ್ಗಳು.      

ಹಟ್ಟಿ ಚಿನ್ನದ ಗಣಿ: ಯಲಗಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಕಡಿತಗೊಳಿಸಿರುವುದರಿಂದ ಶಾಲೆ ಕಗ್ಗತ್ತಲಲ್ಲಿದೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಇಲ್ಲದಂತಾಗಿದೆ.

2008-09ನೇ ಸಾಲಿನಲ್ಲಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯಿಂದ 15 ಕಂಪ್ಯೂಟರ್‌ಗಳನ್ನು ಒದಗಿಸಲಾಗಿತ್ತು. ತರಬೇತಿ ನೀಡುತ್ತಿರುವ ಖಾಸಗಿ ಸಂಸ್ಥೆಯು ನಿರ್ವಹಣೆ ಮಾಡದೇ ಇರುವುದರಿಂದ ತರಬೇತಿ ನಿಲ್ಲಿಸಲಾಗಿದೆ. ಕಂಪ್ಯೂಟರ್ ಹಾಗೂ ಯುಪಿಎಸ್‌ಗಳು ದೂಳು ಹಿಡಿದಿದ್ದು ಮಕ್ಕಳ ಸಮಸ್ಯೆಯನ್ನು ಕೇಳುವವರೆ ಇಲ್ಲದಂತಾಗಿದೆ ಎಂದು ಸ್ಧಳಿಯರು ದೂರಿದ್ದಾರೆ.

ಶಾಲೆಯಲ್ಲಿ 230 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, 10 ಜನ ಸಿಬ್ಬಂದಿ ಇದ್ದಾರೆ. ಶಿಕ್ಷಣ ಇಲಾಖೆಯ ಬೇಜವಬ್ದಾರಿಯಿಂದ ಕಲಿಕೆಗೆ ಹಿನ್ನೆಡೆಯಾಗಿದೆ ಎನ್ನುತ್ತಾರೆ ಪಾಲಕರು.

ತರಬೇತಿ ನೀಡಲು ನಿಯುಕ್ತಿಗೊಳಿಸಿದ್ದ ಖಾಸಗಿ ಸಂಸ್ಥೆಯವರು ₹50,000 ವಿದ್ಯುತ್ ಬಿಲ್ ಪಾವತಿಸದೆ ಇರುವುದರಿಂದ ಶಾಲೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ವಿದ್ಯತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಶಾಲೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಗ್ರಾಮಸ್ಧರು.

ADVERTISEMENT

ಶಾಲಾ ಸಿಬ್ಬಂದಿಗಳನ್ನು ವಿಚಾರಿಸಿದಾಗ ಕಂಪ್ಯೂಟರ್ ತರಬೇತಿಯ ಕೊಠಡಿ ಹಾಗೂ ಶಾಲೆಯ ವಿದ್ಯುತ್ ಮೀಟರ್ ಬೇರೆ ಇದೆ. ಅದರ, ಕಂಪ್ಯೂಟರ್ ನಿರ್ವಹಣೆ ಶಾಲೆಯ ವ್ಯಾಪ್ತಿಗೆ ಬರುವದಿಲ್ಲ. ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯವರು ತರಬೇತಿ ನೀಡುತ್ತಿರುವ ಸಂಸ್ಥೆ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದಿದ್ದಾರೆ. ಸಂಬಂದಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ವಿದ್ಯುತ್ ಸಂಪರ್ಕ ನೀಡಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಧರು.

ಯುಪಿಎಸ್ಗಳು ಧೂಳು

ಹಲವು ಬಾರಿ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಗೆ ಪತ್ರ ಬರೆಯಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಎಜುಸ್ಯಾಟ್ ತರಗತಿಗಳಿಗೆ ತೊಂದರೆಯಾಗಿದೆ ನಾಗನಗೌಡ ಮುಖ್ಯ ಶಿಕ್ಷಕ ಮುಖ್ಯ ಶಿಕ್ಷಕ ಯಲಗಟ್ಟಾ ಪ್ರೌಢಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.