ADVERTISEMENT

ರಾಯಚೂರು: ಕೊರೊನಾ ಜಾಗೃತಿಗೆ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 4 ಮೇ 2020, 15:56 IST
Last Updated 4 ಮೇ 2020, 15:56 IST
ಕೊರೊನಾ ಹತೊಟಿಗೆ ಜಾಗೃತಿಯ ಕುರಿತು ರಾಯಚೂರು ನಗರದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಪಥ ಸಂಚಲನದಲ್ಲಿ ಜನರು ಪೊಲೀಸರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು
ಕೊರೊನಾ ಹತೊಟಿಗೆ ಜಾಗೃತಿಯ ಕುರಿತು ರಾಯಚೂರು ನಗರದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ಪಥ ಸಂಚಲನದಲ್ಲಿ ಜನರು ಪೊಲೀಸರಿಗೆ ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು   

ರಾಯಚೂರು: ಕೊರೊನಾ ವೈರಸ್ ಬಗ್ಗೆ ಹಗುರವಾಗಿ ತಿಳಿಯದಂತೆ ಎಚ್ಚರವಹಿಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ನಗರದ ಗಂಜ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪಥ ಸಂಚಲನ ಹಾಗೂ ಬೀದಿ ನಾಟಕ ಪ್ರದರ್ಶನ ಮಾಡಿ ಜಾಗೃತಿ ಮೂಡಿಸಲಾಯಿತು.

ದೈಹಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿ ಇತರೆ ಮುಂಜಾಗೃತ ಕ್ರಮ ವಹಿಸಿ ಕೊರೊನಾ ತಡೆಯಬಹುದು ಎಂದು ಸಂದೇಶ ಸಾರಿದರು. ಪೊಲೀಸ್ ಇಲಾಖೆಯ ವೈಖರಿಯನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ಮತ್ತಿತರನ್ನು ಮಾಲಾರ್ಪಣೆ ಮಾಡಿ ಹೂ ಚೆಲ್ಲಿ ಸಾರ್ವಜನಿಕರು ಹೂ ಚೆಲ್ಲಿ ಸ್ವಾಗತಿಸಿದರು. ಡಿವೈಎಸ್.ಪಿ ಶಿವಕುಮಾರ, ಪಾಟೀಲ, ಸಿಪಿಐ ಫಸಿಯುದ್ದೀನ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT