ADVERTISEMENT

ಹಟ್ಟಿ | ಚುರುಕುಗೊಂಡ ಹತ್ತಿ ಕಟಾವು: ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:15 IST
Last Updated 15 ಅಕ್ಟೋಬರ್ 2025, 8:15 IST
ಹಟ್ಟಿ ಚಿನ್ನದ ಗಣಿ :ಸಮೀಪದ ರೋಡಲಬಂಡ (ತವಗ) ಗ್ರಾಮದ ಹತ್ತಿರ ಹತ್ತಿ ಬಿಡಿಸುತ್ತಿರುವ ಕೃಷಿ ಕಾರ್ಮಿಕರು.
ಹಟ್ಟಿ ಚಿನ್ನದ ಗಣಿ :ಸಮೀಪದ ರೋಡಲಬಂಡ (ತವಗ) ಗ್ರಾಮದ ಹತ್ತಿರ ಹತ್ತಿ ಬಿಡಿಸುತ್ತಿರುವ ಕೃಷಿ ಕಾರ್ಮಿಕರು.   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದಲ್ಲಿ ಮಳೆ ಬಿಡುವು ನೀಡಿದೆ. ಹತ್ತಿ, ಸಜ್ಜೆ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳ ಕಟಾವು ಕಾರ್ಯ ಭರದಿಂದ ಸಾಗಿದ್ದು, ರೈತರು ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದಾಗಿ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ.

ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ 1450 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, 650 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 600 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ, ಸಜ್ಜೆ 2,934 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.

ರೈತರು, ಹತ್ತಿ ಬಿಡಿಸುವ ಕಾರ್ಯದಲ್ಲಿ ತೊಡಗಿದ್ದು, ವಾರದ ಹಿಂದೆ ಕ್ವಿಂಟಲ್‌ಗೆ ₹ 17 ಸಾವಿರ ಇತ್ತು. ಈಗ ಕ್ವಿಂಟಲ್‌ಗೆ ₹ 16 ಸಾವಿರಕ್ಕೆ ಇಳಿದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ADVERTISEMENT

ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ನಂತರದಲ್ಲಿ ಸುರಿ ಮಳೆಯಿಂದಾಗಿ ಕಾಯಿ ಹಾಳಾಗಿ, ರೈತರ ನಿರೀಕ್ಷೆ ಹುಸಿಯಾಯಿತು ಎಂದು ರೈತ ಕ್ಯಾತನಗೌಡ ಮಾಚನೂರು ಹೇಳಿದರು.

ಕಟವು ಮಾಡಿದ ಹತ್ತಿಯನ್ನು ಸಂಗ್ರಹಿಸಿ ಇಡಲಾಗಿದೆ. ದರ ಕಡಿಮೆಯಿಂದ ಮತ್ತೆ ‌ಸಂಕಷ್ಟ ಎದುರಿಸುವಂತಾಗಿದೆ. ಮಳೆ ಒಂದಡೆಯಾದರೆ ಬೆಲೆ ಕುಸಿತದಿಂದ ರೈತನ ಮೆಲೆ ಮತ್ತೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ರೈತರು.

ಕೇಂದ್ರ ಆರಂಭಕ್ಕೆ ಒತ್ತಾಯ: ಈಗಾಗಲೇ ಹತ್ತಿ, ಸೂರ್ಯಕಾಂತಿ, ಸಜ್ಜೆ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಆದರೆ ಗುತ್ತಿಗೆ ಪಡೆದ ಗುತ್ತಿಗೆದಾರರು, ಈವರೆಗೂ ಕೇಂದ್ರಗಳನ್ನು ಆರಂಭಿಸಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂದಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ದಾವಿಸಲಿ ಎನ್ನುತ್ತಾರೆ ರೈತರು.

ಮಳೆಯಿಂದ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿದೆ. ನೀರು ನಿಲ್ಲದಂತೆ ನೊಡಿಕೊಳ್ಳಬೇಕು. ಔಷಧ ಸಿಂಪಡಣೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಮಾಹಿತಿ ಪಡೆದುಕೊಳ್ಳಲಿ‌
ಮಲ್ಲಿಕಾರ್ಜುನ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಲಿಂಗಸುಗೂರು
ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳು ಗಮನಹರಿಸಬೇಕು
ಬಸವರಾಜ ಗೌಡೂರು ರಾಜ್ಯ ರೈತ ಹಸಿರು ಸೇನೆ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.