ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನಲ್ಲಿ ಬುಧವಾರ ಸಂಜೆ ಮರ ಬಿದ್ದು ದಂಪತಿ ಅವರು ನಿಧನರಾಗಿದ್ದಾರೆ.
ಮುದಗಲ್‌ದಿಂದ ನಾಗಲಾಪುರಕ್ಕೆ ಬೈಕ್ ಮೇಲೆ ಹೊರಟಿದ್ದಾಗ ಹಳೆಯ ಆಲದ ಮರ ಬಿದ್ದು ನಾಗಲಾಪುರದ ರಮೇಶ ಗುಡದಪ್ಪ (25), ಪತ್ನಿ ಅನುಸೂಯಾ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಮೂರು ವರ್ಷದ ಸೌಜನ್ಯಳಿಗೆ ಗಾಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.