ADVERTISEMENT

ಕರ್ತವ್ಯ ಲೋಪದ ಆರೋಪ: ಸಿಪಿಐ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 8:29 IST
Last Updated 2 ಫೆಬ್ರುವರಿ 2021, 8:29 IST
   

ರಾಯಚೂರು: ಕರ್ತವ್ಯ ಲೋಪದ ಆರೋಪ ಆಧರಿಸಿ ರಾಯಚೂರು ತಾಲ್ಲೂಕು ಯರಗೇರಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಂಬಾರಾಯ ಎಂ.ಕಮಾನಮನಿ ಅವರನ್ನು ಈಶಾನ್ಯ ವಲಯ ಬಳ್ಳಾರಿ ವಿಭಾಗದ ಐಜಿಪಿ ನಂಜುಂಡಸ್ವಾಮಿ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಈ ಹಿಂದೆ ಶಕ್ತಿನಗರ ಠಾಣೆಯಲ್ಲಿ ಅಂಬಾರಾಯ ಅವರು ಕಾರ್ಯನಿರ್ವಹಿಸುತ್ತಿದ್ದರು. ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದಾರೆ ಎನ್ನುವ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT