ADVERTISEMENT

ಮಸ್ಕಿ: ತೊಗರಿ ಬೆಳೆಗೆ ಕೀಟಗಳ ಬಾಧೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:32 IST
Last Updated 1 ನವೆಂಬರ್ 2025, 7:32 IST
ತೊಗರಿಕಾಯಿಯನ್ನು ಕೀಟ ತಿನ್ನುತ್ತಿರುವುದು
ತೊಗರಿಕಾಯಿಯನ್ನು ಕೀಟ ತಿನ್ನುತ್ತಿರುವುದು   

ಮಸ್ಕಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಿರಂತರ ಮಳೆಯಿಂದ ತೊಗರಿ ಬೆಳೆ ಹಾನಿಯಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಮಳೆ ಮತ್ತು ವೈರಸ್ ರೋಗದಿಂದ ತೊಗರಿ ಸಸಿ ಒಣಗಿಹೋಗುತ್ತಿದ್ದು, ಹೂವು ಹಾಗೂ ಕೊಳೆ ಕುಸಿದು ಬೀಳುತ್ತಿದೆ. ಪರಿಣಾಮ ಬೆಳೆ ಉತ್ಪಾದನೆಗೆ ತೀವ್ರ ಹೊಡೆತ ಬೀಳಲಿದೆ.

ಮಸ್ಕಿ ಕೃಷಿ ಇಲಾಖೆಯ ಪ್ರಾಥಮಿಕ ವರದಿಯ ಪ್ರಕಾರ, ಈ ಬಾರಿ ತಾಲ್ಲೂಕಿನಲ್ಲಿ ಸುಮಾರು 45 ಹಳ್ಳಿಗಳ 43 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 18 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬೆಳೆ ಬೆಳೆದಿದ್ದು, ಅದರಲ್ಲೂ ಶೇ 43 ಪ್ರದೇಶದಲ್ಲಿ ತೊಗರಿಗೆ ಕೀಟ ಮತ್ತು ವೈರಸ್ ಹಾವಳಿ ತೀವ್ರವಾಗಿದೆ. ಇದರಿಂದ ಉತ್ಪಾದನೆ ಅರ್ಧಕ್ಕಿಂತ ಕಡಿಮೆಯಾಗುವ ಭೀತಿ ವ್ಯಕ್ತವಾಗಿದೆ.

ಕೃಷಿ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿ, ಮಾದರಿ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕುರಿತು ವರದಿ ಸರ್ಕಾರಕ್ಕೆ ಸಲ್ಲಿಸುವ ಕಾರ್ಯ ನಡೆಯುತ್ತಿದೆ.

ADVERTISEMENT

‘ರೈತರ ಬೆಳೆ ಹಾನಿಗೆ ತಕ್ಷಣ ಪರಿಹಾರ ಧನ ನೀಡಬೇಕು. ಕೀಟ ಬಾಧೆಯಿಂದ ಸಮಸ್ಯೆ ಅನುಭವಿಸುತ್ತಿದ್ದ ರೈತರಿಗೆ ಕೀಟನಾಶಕಕ್ಕೆ ಸಹಾಯ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.

ತೊಗರಿ ಬೆಳೆಗೆ ಅಂಟಿರುವ ರೋಗಕ್ಕೆ ಔಷಧ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಅಲ್ಲಿ ಅಧಿಕಾರಿಗಳು ಇರುವುದಿಲ್ಲ‌. ರೈತರ ಸಂಕಷ್ಟಕ್ಕೆ ಅಧಿಕಾರಿಗಕಳು ಬರುತ್ತಿಲ್ಲ
ಮಲ್ಲಯ್ಯ, ತೊಗರಿ ಬೆಳೆಗಾರ
ರೈತ ಸಂಶೋಧಕ ಕೇಂದ್ರಕ್ಕೆ ಕೀಟನಾಶಕ ಕಡಲೆ ಬೀಜ ಪೂರೈಸಲು ಮನವಿ ಮಾಡಿದ್ದು ಕಡಲೆ ಬೀಜ ಪೂರೈಕೆಯಾಗಿದೆ. ಬೇಸಿನ್‌ ಎಸ್ಸೆ ಟ್ರಾನಿಕ್ ಲಭ್ಯವಿದೆ. ತೊಗರಿ ಬೆಳೆಗಳ ಕೀಟನಾಶಕ ಕೆಲ ದಿನಗಳಲ್ಲಿ ಪೂರೈಕೆ ಆಗಲಿದೆ
ವೆಂಕಟೇಶ ಭತ್ರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಸ್ಕಿ
ತೊಗರಿ ಬೆಳೆಗೆ ರೋಗ ಅಂಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.