ADVERTISEMENT

ಹಟ್ಟಿ ಚಿನ್ನದಗಣಿ | ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ: ಶಿಕ್ಷಕ ನಿಂಗಪ್ಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 11:12 IST
Last Updated 9 ಫೆಬ್ರುವರಿ 2025, 11:12 IST
ಗೌಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದಪೂಜೆ ಮಾಡಿದರು
ಗೌಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದಪೂಜೆ ಮಾಡಿದರು   

ಹಟ್ಟಿ ಚಿನ್ನದ ಗಣಿ: ‘ಸಮಾಜದಲ್ಲಿ ಕೌಟುಂಬಿಕ ಸಂಬಂಧಗಳು ಕದಡುತ್ತಿವೆ. ಅದಕ್ಕಾಗಿ ಮಕ್ಕಳಲ್ಲಿ‌ ಸಂಸ್ಕಾರ ಬೆಳೆಸಬೇಕಾದ ಅಗತ್ಯ ಇದೆ’ ಎಂದು ಗೌಡೂರು ಶಾಲೆ ಶಿಕ್ಷಕ ನಿಂಗಪ್ಪ ಹೇಳಿದರು.

ಗೌಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ‘ಸಂಸ್ಕೃತಿ ಉಳಿಸಿ, ಬೆಳೆಸಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘ಈ‌ ಶಾಲೆಯಲ್ಲಿ 198 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು. ನಗರ, ಪಟ್ಟಣ‌ ಪ್ರದೇಶದಲ್ಲಿ ಹಿರಿಯರು, ತಂದೆ–ತಾಯಿಗೆ ಗೌರವ ಕೊಡುವ ಸಂಸ್ಕೃತಿ ಕಡಿಮೆಯಾಗುತ್ತಾ ಬರುತ್ತಿದೆ’ ಎಂದು‌ ಕಳವಳ
ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದಪೂಜೆ ಮಾಡಿದರು.

ADVERTISEMENT

ಶಿಕ್ಷಕ‌ ಚಿದಾನಂದ ಮಾತನಾಡಿದರು.

ಶಿಕ್ಷಕರಾದ ಎಸ್.ತಮ್ಮಣ್ಣನವರ, ಆದಪ್ಪ, ಫಕೀರಣ್ಣ, ಜೀವನಬಿ, ಗುಂಡಮ್ಮ, ಪಾಲಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.