ADVERTISEMENT

ರಾಯಚೂರು: ಮಂತ್ರಾಲಯದಲ್ಲಿ ದರ್ಶನ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 10:23 IST
Last Updated 27 ಜೂನ್ 2021, 10:23 IST
ಶ್ರೀರಾಘವೇಂದ್ರ ಸ್ವಾಮಿ ಮೂಲವೃಂದಾವನ ದರ್ಶನ ಮುಂದುವರಿದಿದೆ. 
ಶ್ರೀರಾಘವೇಂದ್ರ ಸ್ವಾಮಿ ಮೂಲವೃಂದಾವನ ದರ್ಶನ ಮುಂದುವರಿದಿದೆ.    

ರಾಯಚೂರು: ಮಂತ್ರಾಲಯದಲ್ಲಿ ನುಗ್ಗಿದ್ದ ಹಳ್ಳದ ಮಳೆನೀರು ಹರಿದುಹೋಗಿದ್ದು, ಮಳೆ ಸ್ಥಗಿತವಾಗಿದೆ. ಯಥಾಪ್ರಕಾರ ಶ್ರೀರಾಘವೇಂದ್ರ ಸ್ವಾಮಿ ಮೂಲವೃಂದಾವನ ದರ್ಶನ ಮುಂದುವರಿದಿದೆ.

ಶನಿರಾತ್ರಿ ರಾತ್ರಿಯಿಡೀ ಸುರಿದಿದ್ದ ಮಳೆಯಿಂದ ಆಂಧ್ರಪ್ರದೇಶದ ಎಮ್ಮಿಗನೂರು ಹಳ್ಳ ಒಡೆದು ಮಾರ್ಗ ಬದಲಾಯಿಸಿ ಮಂತ್ರಾಲಯ ಗ್ರಾಮಕ್ಕೆ ನುಗ್ಗಿತ್ತು. ಇದರಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕೆಲವು ಮಾರ್ಗಗಳಲ್ಲಿ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಭಕ್ತರ ವಾಹನಗಳು ಜಲಾವೃತವಾಗಿದ್ದವು. ಮಳಿಗೆಗಳಿಗೂ ನೀರು ನುಗ್ಗಿತ್ತು. ಆದರೆ ಮಠದ ಆವರಣ ಜಲಾವೃತ ಆಗಿರಲಿಲ್ಲ.

ಇದೀಗ ದರ್ಶನಕ್ಕಾಗಿ ಭಕ್ತರು ಬರುತ್ತಿದ್ದಾರೆ ಎಂದು ಮಠದ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.