ADVERTISEMENT

ಹಟ್ಟಿ ಚಿನ್ನದಗಣಿ: ಜಿಂಕೆವನ ನಿರ್ಮಾಣಕ್ಕೆ ಒತ್ತಾಯ 

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:21 IST
Last Updated 13 ಆಗಸ್ಟ್ 2021, 14:21 IST
ಹಟ್ಟಿ ಪಟ್ಟಣದ ಹೊರವಲಯದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು   ಹಿಂಡಾಗಿ ಕಾಣಿಸಿಕೊಂಡ ಪರಿ.  
ಹಟ್ಟಿ ಪಟ್ಟಣದ ಹೊರವಲಯದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು   ಹಿಂಡಾಗಿ ಕಾಣಿಸಿಕೊಂಡ ಪರಿ.     

ಹಟ್ಟಿ ಚಿನ್ನದಗಣಿ: ಇಲ್ಲಿನ ರೋಡಲಬಂಡ ಆನ್ವರಿ, ಕೋಠಾ, ಗುರುಗುಂಟಾ ಗ್ರಾಮಗಳ ಸುತ್ತಮುತ್ತ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಜಿಂಕೆಗಳಿವೆ. ಆದ್ದರಿಂದ ಸರ್ಕಾರ ಈ ಪ್ರದೇಶದಲ್ಲಿ ಜಿಂಕೆವನ ನಿರ್ಮಾಣ ಮಾಡಬೇಕು. ಇದರಿಂದ ಈ ಭಾಗವುಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗುತ್ತದೆ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಬೇಟೆಗಾರರಿಂದ ಜಿಂಕೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಣಿ ಪ್ರಿಯರಾದ, ನಿಂಗರಾಜ, ಅಂಬಣ್ಣ, ರವಿಕುಮಾರ, ಅಂಬರೇಶ ಆಗ್ರಹಿಸಿದ್ದಾರೆ.

ಜಿಂಕೆಗಳ ರಕ್ಷಣೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದರೆ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚಾಗಿ ನವಿಲು, ಜಿಂಕೆಗಳಿವೆ. ಇವುಗಳು ಆಹಾರ ಅರಸಿ, ಹೋಲ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ನಾಯಿ, ಬೇಟೆಗಾರರ ಕಣ್ಣಿಗೆ ಬಿದ್ದು ಜಿಂಕೆ, ನವಿಲುಗಳು ಸಾವನಪ್ಪುತ್ತಿವೆ. ಆದ್ದರಿಂದ ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ಅವರು ಒತ್ತಾಯಿಸುತ್ತಾರೆ.

ADVERTISEMENT

ಹಟ್ಟಿ ಪಟ್ಟಣದ ಸುತ್ತಮುತ್ತ ನೂರಾರು ಜಿಂಕೆ ಹಾಗೂ ನವಿಲುಗಳು ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು, ಪ್ರಾಣಿಪಕ್ಷಿಗಳ ರಕ್ಷಿಸಿ, ಜಿಂಕೆವನ ನಿರ್ಮಿಸಿದರೆ ಅವುಗಳಿಗೆ ಸೂಕ್ತ ರಕ್ಷಣೆ ನೀಡಿದಂತಾಗುತ್ತದೆ ಎಂದು ಸಮಾಜ ಸೇವಕ ಭಗವಂತಕುಮಾರ್, ಅಮರೇಶ ರಾಠೋಡ್ ಮಲ್ಲಿಕಾರ್ಜುನ ಹಾಗೂ ಅಭೀಷೇಕ್ ನಾಯಕ ಹೇಳುತ್ತಾರೆ.

ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲುಧಾಮ, ಜಿಂಕೆವನ ಸ್ಧಾಪನೆಗೆ ಜನಪ್ರತಿನಿದಿಗಳು ಮುಂದಾಗಬೇಕು. ಆಗ ಮಾತ್ರ ಜಿಂಕೆ ಹಾಗೂ ನವಿಲುಗಳಿಗೆ ರಕ್ಷಣೆ ಒದಗಿಸಿದಂತಾಗುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ, ರವಿ ಉಳಿಮೇಶ್ವರ ಅವರ ಅನಿಸಿಕೆಯಾಗಿದೆ.

‘ಹಟ್ಟಿ ಭಾಗದ ಸುತ್ತಮುತ್ತ, ನವಿಲು ಹಾಗೂ ಜಿಂಕೆಗಳ ರಕ್ಷಣೆ ನಮ್ಮೆಲ್ಲರ ಹೋಣೆ, ನವಿಲುಧಾಮ ಹಾಗೂ ಜಿಂಕೆವನ ನಿರ್ಮಾಣಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎನ್ನುತ್ತಾರೆ ಲಿಂಗಸುಗೂರಿನ ಅರಣ್ಯ ಇಲಾಖೆಯ ಅಧಿಕಾರಿ ಚನ್ನಬಸವ ಕಟ್ಟಿಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.