ADVERTISEMENT

ಜೋಳ ಖರೀದಿ ಹಣ ರೈತರ ಖಾತೆಗೆ ಜಮಾ ಮಾಡಿ: ಬಸವರಾಜ ಗೋಡಿಹಾಳ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 7:15 IST
Last Updated 9 ಜುಲೈ 2025, 7:15 IST
<div class="paragraphs"><p>ಬಸವರಾಜ ಗೋಡಿಹಾಳ</p></div>

ಬಸವರಾಜ ಗೋಡಿಹಾಳ

   

ಸಿಂಧನೂರು: ಖರೀದಿ ಕೇಂದ್ರಗಳ ಮೂಲಕ ಸರ್ಕಾರ ಖರೀದಿಸಿರುವ ಹಿಂಗಾರು ಮತ್ತು ಮುಂಗಾರು ಹಂಗಾಮಿನ ಜೋಳದ ಹಣವನ್ನು ತಕ್ಷಣವೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇ ತಿಂಗಳಲ್ಲಿ ಖರೀದಿಸಿದ ಜೋಳದ ಹಣ ಒಂದು ತಿಂಗಳಾದರೂ ಬಿಡುಗಡೆಗೊಳಿಸಿಲ್ಲ. ಇದರಿಂದ ರೈತರು ಜೀವನ ನಡೆಸಲು ಕಷ್ಟವಾಗಿದೆ ಎಂದರು.

ADVERTISEMENT

ಉತ್ತಮ ಮಳೆಯಾಗಿದ್ದು, ಕಾಲುವೆಗೆ ನೀರು ಬಂದಿರುವ ಕಾರಣ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಬಿತ್ತನೆ ಕಾರ್ಯಕ್ಕೆ ಹಣದ ಅವಶ್ಯಕತೆ ಇರುವುದರಿಂದ ರೈತರು ಮತ್ತೆ ಸಾಲದ ಮೊರೆ ಹೋಗುವಂತಾಗಿದೆ. ಕೂಡಲೇ ಜೋಳ ಖರೀದಿಸಿದ ಹಣ ನೀಡಲು ವಿಳಂಬ ಮಾಡಿದಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ಬೇಡಿಕೆ ಅನುಗುಣವಾಗಿ ತಾಲ್ಲೂಕಾಡಳಿತ ಹಾಗೂ ಕೃಷಿ ಇಲಾಖೆ ಮುಂಜಾಗ್ರತೆ ವಹಿಸಬೇಕು. ಕಳಪೆ ಬೀಜ, ರಸಗೊಬ್ಬರ ಪೂರೈಕೆ, ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.

ವಿದ್ಯಾರ್ಥಿ ಘಟಕ ರಚನೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿ ಘಟಕ ರಚಿಸಲಾಗಿದ್ದು, ತಾಲ್ಲೂಕು ಘಟಕಕ್ಕೆ ವೀರೇಶ ದಿದ್ದಿಗಿ (ಅಧ್ಯಕ್ಷ), ಹುಚ್ಚಪ್ಪ ಹರೇಟನೂರು (ಗೌರವಾಧ್ಯಕ್ಷ), ಸಿದ್ದನಗೌಡ (ಉಪಾಧ್ಯಕ್ಷ), ಮಾಳಿಂಗರಾಯ (ಪ್ರಧಾನ ಕಾರ್ಯದರ್ಶಿ), ಪಂಪಾಪತಿ, ಮಲ್ಲಪ್ಪ ದಿದ್ದಿಗಿ (ಸಹಕಾರ್ಯದರ್ಶಿಗಳು), ಬಸವರಾಜ ಕುರಿ (ಖಜಾಂಚಿ), ಮೌನೇಶ, ಮಲ್ಲಯ್ಯ (ಸದಸ್ಯರು) ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಘಟಕದ ಗೌರವಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ಅಧ್ಯಕ್ಷ ನಾಗರಾಜ ಬಿಂಗಿ, ಉಪಾಧ್ಯಕ್ಷ ಯಮನಪ್ಪ ಪಗಡದಿನ್ನಿ, ಕಾರ್ಯದರ್ಶಿ ಬಸವರಾಜ ಸುಲ್ತಾನಪುರ, ಸದಸ್ಯರಾದ ಮಲ್ಲೇಶ ದಿದ್ದಿಗಿ, ಸಿದ್ದನಗೌಡ, ಮಾಳಿಂಗರಾಯ, ಹುಚ್ಚಪ್ಪ ಹರೇಟನೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.