ADVERTISEMENT

ಮೂಲಸೌಕರ್ಯಗಳಿಗೆ ಆದ್ಯತೆ: ಶರಣಗೌಡ ಬಕ್ರಿ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:39 IST
Last Updated 18 ಮೇ 2022, 4:39 IST
ದೇವದುರ್ಗ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿದ ಅಧ್ಯಕ್ಷ, ಸದಸ್ಯರು
ದೇವದುರ್ಗ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿದ ಅಧ್ಯಕ್ಷ, ಸದಸ್ಯರು   

ದೇವದುರ್ಗ: ಪಟ್ಟಣಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ಮೊದಲು ಆದ್ಯತೆ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಶರಣಗೌಡ ಬಕ್ರಿ ಹೇಳಿದರು.

ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಹಾಗೂ 15ನೇ ಹಣಕಾಸು ನಿಧಿ ಯೋಜನೆಯಡಿ ಬಿಡುಗಡೆಯಾದ ₹1.90 ಕೋಟಿ ಅನುದಾನ ಬಳಕೆಯ ಕ್ರಿಯಾಯೋಜನೆ ಸಿದ್ಧಪಡಿಸಲು ಸದಸ್ಯರ ತುರ್ತು ಸಭೆ ಕರೆಯಲಾಗಿದೆ. ಎಲ್ಲಾ ವಾರ್ಡ್‌ಗಳಿಗೆ ಮೂಲಸೌಕರ್ಯ ಒದಗಿಸಲು ಉಪಯೋಗಿಸಲು ಸದಸ್ಯರಿಗೆ ತಿಳಿಸಲಾಗಿದೆ ಎಂದರು.

ADVERTISEMENT

ಸದಸ್ಯ ಮಾನಪ್ಪ ಮೇಸ್ತ್ರಿ ಮಾತನಾಡಿ, ಖಾಲಿ ಹುದ್ದೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಯಾಗಿ ಖಾಯಂ ಅಥವಾ ಗುತ್ತಿಗೆ ಆಧಾರದ ನೇಮಕಕ್ಕೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ನಿರ್ಣಯ ಕೈಗೊಂಡರು.

ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಉಪಾಧ್ಯಕ್ಷೆ ಸಾಬಮ್ಮ, ಸದಸ್ಯರಾದ ಹನುಮಗೌಡ ಬಡಿಗೇರ್, ಶಿವಮ್ಮ, ಭೀಮನಗೌಡ ಮೇಟಿ, ಲಚಮಯ್ಯ, ಯಲ್ಲಮ್ಮ, ಮಾನಪ್ಪ, ಚನ್ನಮ್ಮ, ಚಂದ್ರಶೇಖರ ಕುಂಬಾರ್, ಮರಿಯಂಬೀ, ಖಾಜಾಹುಸೇನ್, ವೆಂಕಟೇಶ ಮಕ್ತಲ್, ಮಲ್ಲಮ್ಮ, ಜಿ.ಪಂಪಣ್ಣ, ನಾಗರಾಜ, ಚಂದ್ರಕಾಂತ, ನಾಗಪ್ಪ, ರೇಣುಕಾ, ಸಿದ್ದಮ್ಮ, ತಬಸುಮ್ ಉದ್ದಾರ, ಲಕ್ಷ್ಮಿ, ಪಾರ್ವತಿ, ನಾಮನಿರ್ದೇಶಿತ ಸದಸ್ಯರಾದ ರವಿಕುಮಾರ್ ಪಾಟೀಲ ಅಳ್ಳುಂಡಿ, ಚಂದ್ರಶೇಖರ, ಟಿ.ಜಾಕೀರ್ ಹುಸೇನ್, ಹನುಮೇಶ ನಾಯಕ, ಕೆ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.