
ಪ್ರಜಾವಾಣಿ ವಾರ್ತೆ
ದೇವದುರ್ಗ: ಪಟ್ಟಣದ ಹೊರವಲಯದ ಕೊಪ್ಪರ ಕ್ರಾಸ್ ಹತ್ತಿರದ ಮನೆಯ ಮೇಲೆ ಗುರುವಾರ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ 4 ಜನ ಆರೋಪಿಗಳನ್ನು ಬಂಧಿಸಿ ಒಬ್ಬ ಮಹಿಳೆಯರನ್ನು ರಕ್ಷಿಸಿದ್ದಾರೆ.
ಪಟ್ಟಣದ ಬಸವೇಶ್ವರ ಓಣಿ ನಿವಾಸಿ ಸುಮಂಗಲಾ (55), ತೆಗ್ಗಿಹಾಳ ಗ್ರಾಮದ ರಾಜವರ್ಧನ ನಾಯಕ (21), ಹಿರೇಬೂದೂರು ಗ್ರಾಮದ ದ್ಯಾವಪ್ಪ (40) ಮತ್ತು ರವಿ ಛಲವಾದಿ ಅವರನ್ನು ದೇವದುರ್ಗ ಪೊಲೀಸ್ ಠಾಣೆ ಪಿಐ ಮಂಜುನಾಥ ಎಸ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.
ದಾಳಿ ವೇಳೆ 10 ನಿರೋಧ್, 4 ಫೋನ್, ₹6 ಸಾವಿರ ನಗದು ವಶಕ್ಕೆ ಪಡೆದು, ಗದಗ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.