ADVERTISEMENT

ಮಸ್ಕಿ | ಮಲ್ಲಯ್ಯನ ದರ್ಶನಕ್ಕೆ ತಿಂಗಳಕಾಲ ಬೆಟ್ಟ ಹತ್ತುವ ಭಕ್ತರು

ಇಂದಿನಿಂದ ಶ್ರಾವಣಮಾಸ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 6:39 IST
Last Updated 25 ಜುಲೈ 2025, 6:39 IST
ಕಲ್ಲಿನ ಮೂಡಿರುವ ಮಲ್ಲಯ್ಯ ನ ವಿಗ್ರಹ
ಕಲ್ಲಿನ ಮೂಡಿರುವ ಮಲ್ಲಯ್ಯ ನ ವಿಗ್ರಹ   

ಮಸ್ಕಿ: ಶ್ರಾವಣಮಾಸ ಆರಂಭವಾದ ಹಿನ್ನೆಲೆಯಲ್ಲಿ ಎರಡನೇ ಶ್ರೀಶೈಲ ಎಂದು ಪ್ರಸಿದ್ದಿ ಪಡೆದ ಪಟ್ಟಣದ ಆರಾಧ್ಯದೈವ ಬೆಟ್ಟದ ಮೇಲೆ ನೆಲೆಸಿರುವ ಮಲ್ಲಯ್ಯ (ಮಲ್ಲಿಕಾರ್ಜುನ) ದೇವಸ್ಥಾನದಲ್ಲಿ ಜು. 24 (ಗುರವಾರ) ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭವಾಗಿವೆ.

ಇಲ್ಲಿ ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ನೂರಾರು ಭಕ್ತರು ಕಾಲ್ನಡಿಗೆಯಿಂದ 500ಕ್ಕೂ ಹೆಚ್ಚು ಮೆಟ್ಟಲುಗಳನ್ನು ಹತ್ತಿ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜೆಗಳನ್ನು ಮಲ್ಲಯ್ಯನಿಗೆ ಸಲ್ಲಿಸಿ ಅರಿಕೆ ತೀರಿಸಿಕೊಳ್ಳುತ್ತಾರೆ. ಪ್ರತಿ ಸೋಮವಾರ ರಾಯಚೂರು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ನೂರಾರು ಭಕ್ತರು ಅರಿಕೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಬೆಟ್ಟದ ಮೆಟ್ಟಲುಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಲಾಗಿದೆ. ದೇವಸ್ಥಾನದ ಮೇಲೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ತಗಡಿನ ಶೆಡ್ ಹಾಕಲಾಗಿದೆ. ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೌಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

ADVERTISEMENT

ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರು ಸಾಲಾಗಿ ಹೋಗಿ ದರ್ಶನ ಪಡೆಯಲು ಬ್ಯಾರಿಕೆಡ್ ವ್ಯವಸ್ಥೆ ಮಾಡಲಾಗಿದೆ. ಕಲ್ಲಿನಲ್ಲಿ ಮೂಡಿರುವ ಮಲ್ಲಯ್ಯನಿಗೆ ಹೂವಿನಿಂದ ವಿಶೇಷ ಅಲಂಕಾರದ ವ್ಯವಸ್ಥೆಯನ್ನು ದೇವಸ್ಥಾನದ ಅರ್ಚಕರು ಮಾಡಲು ಮುಂದಾಗಿದ್ದಾರೆ.

ಬೆಟ್ಟಕ್ಕೆ ವಾಹನದ ಮೇಲೆ ಹತ್ತಲು ಕಾಂಕ್ರಿಟ್ ರಸ್ತೆ ಮಾಡಲಾಗಿದ್ದು, ಪುರಸಭೆ ರಸ್ತೆಯ ಅಕ್ಕ ಪಕ್ಕದಲ್ಲಿ ಜಾಲಿ ಗಿಡಗಳನ್ನು ತೆರವುಗೊಳಿಸಿ ಸ್ವಚ್ಚ ಮಾಡಲು ಕ್ರಮ ಕೈಗೊಂಡಿದೆ. ಒಂದು ತಿಂಗಳ ಕಾಲ ನಡೆಯುವ ಮಲ್ಲಯ್ಯನ ದರ್ಶನಕ್ಕೆ ಸಕಲ ಸಿದ್ಧತೆಗಳು ಬರದಿಂದ ಸಾಗಿವೆ.

ಬೆಟ್ಟದ ಮೇಲಿರುವ ಮಲ್ಲಯ್ಯನ ಕಲ್ಲಿನ ಶಿಲಾ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.