ADVERTISEMENT

ಉಚಿತ ಪಠ್ಯ ಪುಸ್ತಕ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 12:20 IST
Last Updated 11 ಜೂನ್ 2019, 12:20 IST
ರಾಯಚೂರಿನ ಜವಾಹನಗರ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಪ್ರಭಾರಿ ಮುಖ್ಯ ಶಿಕ್ಷಕ ಮುರಳೀಧರ ಕುಲಕರ್ಣಿ ವಿತರಣೆ ಮಾಡಿದರು
ರಾಯಚೂರಿನ ಜವಾಹನಗರ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಪ್ರಭಾರಿ ಮುಖ್ಯ ಶಿಕ್ಷಕ ಮುರಳೀಧರ ಕುಲಕರ್ಣಿ ವಿತರಣೆ ಮಾಡಿದರು   

ರಾಯಚೂರು: ನಗರದ ಕೆ.ಎಸ್.ಎಸ್.ಬಿ. ಜವಾಹರನಗರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಸೋಮವಾರ ವಿತರಣೆ ಮಾಡಲಾಯಿತು.

ಪುಸ್ತಕ ವಿತರಣೆ ಮಾಡಿದ ಪ್ರಭಾರಿ ಮುಖ್ಯ ಶಿಕ್ಷಕ ಮುರಳೀಧರ ಕುಲಕರ್ಣಿ ಮಾತನಾಡಿ, ಸರ್ಕಾರ ನೀಡಿರುವ ಉಚಿತ ಪುಸ್ತಕಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಉಚಿತ ಪುಸ್ತಕವೆಂದು ಅಸಡ್ಡೆ ತೋರದೆ ಸಂರಕ್ಷಣೆ ಮಾಡಿ, ಶೈಕ್ಷಣಿಕ ವರ್ಷ ಮುಗಿದ ನಂತರ ಶಾಲೆಯ ಗ್ರಂಥಾಲಯಕ್ಕೆ ನೀಡಿ ಸಹಕರಿಸಬೇಕು ಎಂದು ಹೇಳಿದರು.

ಶಿಕ್ಷಕರಾದ ಜಿ.ಎಸ್.ಸಂಧ್ಯಾ, ಮುರಳೀಧರ ಪುರಾಣಿಕ, ರವೀಂದ್ರ ಕುಲಕರ್ಣಿ ಹಾಗೂ ಪಾಲಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.