ADVERTISEMENT

ಲಿಂಗಸುಗೂರು | ಚಾಲಕನ ಸಮಯ ಪ್ರಜ್ಞೆ: ತಪ್ಪಿದ ದುರಂತ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 14:12 IST
Last Updated 18 ಆಗಸ್ಟ್ 2024, 14:12 IST
ಲಿಂಗಸುಗೂರು ತಾಲ್ಲೂಕು ತೊರಲಬೆಂಚಿ ಬಳಿ ಸಾರಿಗೆ ಬಸ್‍ ಸ್ಟೇರಿಂಗ್‍ ದೋಷದಿಂದ ಶನಿವಾರ ಗದ್ದಿಗೆ ನುಗ್ಗಿರುವುದು.
ಲಿಂಗಸುಗೂರು ತಾಲ್ಲೂಕು ತೊರಲಬೆಂಚಿ ಬಳಿ ಸಾರಿಗೆ ಬಸ್‍ ಸ್ಟೇರಿಂಗ್‍ ದೋಷದಿಂದ ಶನಿವಾರ ಗದ್ದಿಗೆ ನುಗ್ಗಿರುವುದು.   

ಲಿಂಗಸುಗೂರು: ತಾಲ್ಲೂಕು ಕೇಂದ್ರದಿಂದ ತೊರಲಬೆಂಚಿ ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್‍ ಸ್ಟೇರಿಂಗ್‍ ಬೋಲ್ಟ್ ಕಟ್ಟಾಗಿ ನಿಯಂತ್ರಣ ತಪ್ಪಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶನಿವಾರ ಸಂಜೆ ಶಾಲಾ–ಕಾಲೇಜು ಮಕ್ಕಳನ್ನು ತುಂಬಿಕೊಂಡು ಈಚನಾಳ ಮಾರ್ಗವಾಗಿ ತೆರಳುತ್ತಿದ್ದ ಬಸ್‍ ರಸ್ತೆ ಮಧ್ಯೆಯೆ ಸ್ಟೇರಿಂಗ್‍ ದೋಷದಿಂದ ತೆಗ್ಗು ಗುಂಡಿಗೆ ಬೀಳುವ ಸಾಧ್ಯತೆ ಇತ್ತು. ಸಾಹಸಮಯ ಚಾಲನೆ ಗದ್ದಿಗೆ ನುಗ್ಗಿದ ಬಸ್‍ನಿಂದ ಪ್ರಯಾಣಿಕರು ಸುರಕ್ಷಿತವಾಗಿ ಇಳಿದುಕೊಂಡಿದ್ದಾರೆ.

ಕೆ.ಎ 36 ಎಫ್‍ 1222 ಬಸ್‍ ಚಾಲನೆ ತಪ್ಪಿ ಸುರಕ್ಷಿತವಾಗಿ ನಿಂತಿದೆ. ಬಸ್‍ ಸಣ್ಣ ಗುಂಡಿಗೆ ಇಳಿಯುತ್ತಿದ್ದಂತೆ ಪ್ರಯಾಣಿಕರು ಇಳಿದು ಮೂರು ಕಿಲೋ ಮೀಟರ್‍ ಅಂತರದ ತೋರಲಬೆಂಚಿ ಗ್ರಾಮ ತಲುಪಿಸದರು. ಸುಸಜ್ಜಿತ ಬಸ್‍ ಬಿಡದಿರುವುದಕ್ಕೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.