
ರಾಯಚೂರು: ಯುವಕರು ವರ್ಷಾಚರಣೆಯ ಪ್ರಯುಕ್ತ ಬಾಡೂಟದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಚಳಿ ಮುಂದುವರಿದಿರುವ ಕಾರಣ ತರಕಾರಿ ಮಾರುಕಟ್ಟೆಯಲ್ಲಿನ ವ್ಯವಹಾರ ಮಂದಗತಿಯಲ್ಲಿ ಸಾಗಿದೆ. ಬಹುತೇಕ ತರಕಾರಿಗಳು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯ ಇದೆ.
ಈರುಳ್ಳಿ, ಬೀನ್ಸ್, ಟೊಮೆಟೊ, ಬದನೆಕಾಯಿ. ಬೆಂಡೆಕಾಯಿ ಬೆಲೆ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ ಬೆಲೆ ₹2 ಸಾವಿರ, ಆಲೂಗಡ್ಡೆ ₹1 ಸಾವಿರ ಕಡಿಮೆಯಾಗಿದೆ. ಹಿರೇಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಸೌತೆಕಾಯಿ ₹2 ಸಾವಿರ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ಬೀಟ್‌ರೂಟ್ ಹಾಗೂ ಚವಳೆಕಾಯಿ ₹1 ಸಾವಿರ ಹೆಚ್ಚಾಗಿದೆ.
ಚಳಿ ಸುಲಭವಾಗಿ ಬಿಡದ ಕಾರಣ ದೈಹಿಕ ಉಷ್ಣಾಂಶ ಕಾಯ್ದುಕೊಳ್ಳಲು ಜನ ನುಗ್ಗೆಕಾಯಿ ಕೇಳಿ ಖರೀದಿಸುತ್ತಿದ್ದಾರೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ನುಗ್ಗೆಕಾಯಿ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿಗೆ ₹400ಕ್ಕೆ ಮಾರಾಟವಾಗುತ್ತಿದ್ದರೂ ಗುಣಮಟ್ಟದ ನುಗ್ಗೆಕಾಯಿ ದೊರಕುತ್ತಿಲ್ಲ.
ಈರುಳ್ಳಿಯ ಬೆಲೆ ಏರಿಳಿತ ಹೋಟೆಲ್ ಉದ್ಯಮ ಹಾಗೂ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ದೊಡ್ಡ ಗಾತ್ರದ ಗುಣಮಟ್ಟದ ಈರುಳ್ಳಿ ₹40 ರವರೆಗೆ ಇವೆ. ಸಣ್ಣ ಗಾತ್ರದ ಈರುಳ್ಳಿ ಪ್ರತಿ ಕೆಜಿಗೆ ₹20ಗೆ ಲಭ್ಯವಿದೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬರುತ್ತಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಆವಕವಾಗಿದೆ. ಆಂಧ್ರಪ್ರದೇಶದ ಗಡಿ ಗ್ರಾಮ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ, ಅವರೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ಮದುವೆ ಮುಂಜಿಗಳು ಶುರುವಾದ ಮೇಲೆ ತರಕಾರಿ ಬೆಲೆ ಹೆಚ್ಚಾಗಲಿದೆ. ಸಂಕ್ರಾಂತಿ ವೇಳೆಗೆ ತರಕಾರಿ ಬೆಲೆ ದುಪ್ಪಟ್ಟು ಆಗಲಿದೆ. ಚಳಿಯ ಕಾರಣ ತರಕಾರಿ ಮಾರುಕಟ್ಟೆಯಲ್ಲಿನ ವ್ಯವಹಾರ ಮಂದಗತಿಯಲ್ಲಿ ಸಾಗಿದೆ’ ಎಂದು ತರಕಾರಿ ವ್ಯಾಪಾರಿ ಶಶಿಕುಮಾರ ಹೇಳುತ್ತಾರೆ.
ರಾಯಚೂರು ತರಕಾರಿ ಬೆಲೆ ತರಕಾರಿ (ಪ್ರತಿ ಕೆ.ಜಿ);
ಕಳೆದ ವಾರ;ಈ ವಾರ (₹ಗಳಲ್ಲಿ) ಈರುಳ್ಳಿ;35‘30 ಬೆಳ್ಳುಳ್ಳಿ;140;120 ಆಲೂಗಡ್ಡೆ;40;30 ಮೆಣಸಿನಕಾಯಿ;50;60 ಎಲೆಕೋಸು;20;40 ಹೂಕೋಸು;30;40 ಗಜ್ಜರಿ;40;50 ಬೀಟ್‌ರೂಟ್;30;40 ಬೀನ್ಸ್;40;40 ಟೊಮೆಟೊ;40;40 ಬದನೆಕಾಯಿ;30;30 ಹಿರೇಕಾಯಿ;40;60 ಬೆಂಡೆಕಾಯಿ;60;60 ತೊಂಡೆಕಾಯಿ;60;80 ಡೊಣಮೆಣಸಿನಕಾಯಿ;40;60 ತುಪ್ಪದ ಹಿರೇಕಾಯಿ;40;60 ಚವಳೆಕಾಯಿ;50;60 ಸೌತೆಕಾಯಿ;40;60 ನುಗ್ಗೆಕಾಯಿ;200;400 ಸೊಪ್ಪಿನ ಬೆಲೆ ಸಬ್ಬಸಗಿ;₹10ಕ್ಕೆ 4ಸಿವುಡು ಮೆಂತೆ;₹10ಕ್ಕೆ 4ಸಿವುಡು ಕೊತಂಬರಿ;₹10ಕ್ಕೆ 4 ಸಿವುಡು ಪಾಲಕ್;10ಗೆ 4 ಸಿವುಡು ಪುಂಡಿಪಲ್ಯ; ₹10ಗೆ 5 ಸಿವುಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.