ಕವಿತಾಳ: ಪಟ್ಟಣ ಸೇರಿ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸುರಿದ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಗೆ ವಿವಿಧೆಡೆ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು ಬಿದ್ದಿವೆ.
ಬಿರುಗಾಳಿಯ ಆರ್ಭಟಕ್ಕೆ ಇಲ್ಲಿನ ಆನ್ವರಿ ಕ್ರಾಸ್, ತರಕಾರಿ ಅಂಗಡಿ ಎದುರು ಮರಗಳು ಬುಡ ಸಮೇತ ನೆಲಕ್ಕುರುಳಿವೆ. 14ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಸಮೀಪದ ವಟಗಲ್ ಗ್ರಾಮದ ಈಶ್ವರ ದೇವಸ್ಥಾನದ ಮುಂದಿನ ದೊಡ್ಡ ಬೇವಿನ ಮರ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಪಾಮನಕಲ್ಲೂರು ಗ್ರಾಮದಲ್ಲಿ ಮರಗಳು ಬಿದ್ದಿವೆ.
ಸಾಧಾರಣ ಮಳೆ ಸುರಿದಿದ್ದು, ಗಾಳಿಯ ಆರ್ಭಟಕ್ಕೆ ವಿವಿಧೆಡೆ ಅಂಗಡಿ ಎದುರು ಹಾಕಿದ ನಾಮ ಫಲಕಗಳು, ಟಿನ್ ಶೀಟ್ ಗಳು ಕಿತ್ತು ಹೋಗಿವೆ. ಬಿರುಗಾಳಿ ಬೀಸಿದ ಪರಿಣಾಮ ದೂಳು ಹರಡಿ ವಾಹನ ಸವಾರರು ಪರದಾಡಿದರು. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಸೋಮವಾರ ದಿನಪೂರ್ತಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.