ಸಿಂಧನೂರು: ‘ಭಾರತೀಯ ಸಂಸ್ಕೃತಿಯಲ್ಲಿ ದಸರಾ ಮತ್ತು ವಿಜಯದಶಮಿಗೆ ವಿಶಿಷ್ಟ ಸ್ಥಾನವಿದೆ’ ಎಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ರಾಗಲಪರ್ವಿ ಕ್ರಾಸ್‍ನಲ್ಲಿರುವ ವಿ.ಸಿ.ಬಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ನಡೆದ 5ನೇ ದಿನದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,‘ತಾಲ್ಲೂಕಿನಲ್ಲಿ ಸದಾ ಶಾಂತಿ, ಸಾಮರಸ್ಯ ಮತ್ತು ಸಮೃದ್ಧಿಯಿಂದ ಜನರು ಬಾಳಬೆಕನ್ನುವ ಉದ್ದೇಶದಿಂದ ಎರಡು ವರ್ಷಗಳಿಂದ ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. ಯಾವುದೇ ಕೆಟ್ಟ ಗಳಿಗೆಯಲ್ಲಿ ಉಂಟಾದ ಘಟನೆಗಳಿಂದ ಪರಸ್ಪರ ದ್ವೇಷ, ಅಸೂಯೆಗಳು ಹುಟ್ಟಿಕೊಂಡಿರುತ್ತವೆ. ಅವುಗಳನ್ನು ಮರೆಯಲು ದಸರಾ ಹಬ್ಬ ವರದಾನವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ದುಷ್ಟಶಕ್ತಿ ಸಂಹಾರ ಮಾಡಿ ಶಿಷ್ಟ ಶಕ್ತಿ ಜಯಸಾಧಿಸುವುದರ ಸಂಕೇತವಾಗಿರುವ ದಸರಾದಲ್ಲಿ ಕೆಡಕುಗಳನ್ನು ಮರೆತು ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮತ್ತು ಸದ್ಭಾವ ಇರುವ ಶಕ್ತಿಗಳನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ’ ಎಂದರು.
ತಹಶೀಲ್ದಾರ್ ಅರುಣ ಕುಮಾರ ದೇಸಾಯಿ, ಡಿವೈಎಸ್‍ಪಿ ಬಿ.ಎಸ್.ತಳವಾರ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಡ, ಖಾಜಿ ಮಲ್ಲಿಕ್ ವಕೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ದಸರಾ ಸ್ವಾಗತ ಸಮಿತಿ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ವಿ.ಸಿ.ಬಿ. ಶಿಕ್ಷಣ ಸಂಸ್ಥೆಯ ಸರ್ವೋತ್ತಮ ರೆಡ್ಡಿ, ರಾಗಲಪರ್ವಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಮಾರೆಪ್ಪ, ರಾಮತ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಹನಮರೆಡ್ಡಿ, ಗೋನ್ವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪಂಪಾಪತಿ, ಹೆಡಗಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಗೌಡ ದೇಸಾಯಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮಯ್ಯ ನಾಯಕ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಹನುಮರೆಡ್ಡಪ್ಪಗೌಡ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಮುಖಂಡರಾದ ಅರುಣಕುಮಾರ ಯಾಪಲಪರ್ವಿ, ಅಮರಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.