ADVERTISEMENT

ಆರ್ಥಿಕ ಸಹಯೋಗ ದಿನ ಆಚರಣೆ 15ರಂದು

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 13:13 IST
Last Updated 6 ಜನವರಿ 2019, 13:13 IST

ರಾಯಚೂರು: ಬಹುಜನ ಸಮಾಜ ಪಾರ್ಟಿ ನಾಯಕಿ ಮಾಯಾವತಿಯ 63ನೇ ಜನ್ಮದಿನದ ಅಂಗವಾಗಿ ಜನವರಿ 15ರಂದು ಆರ್ಥಿಕ ಸಹಯೋಗ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಬಿಎಸ್ಪಿ ಜಿಲ್ಲಾ ಘಟಕ ಅಧ್ಯಕ್ಷ ಎಂ.ಆರ್‌.ಭೇರಿ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಹಯೋಗ ದಿನದ ಅಂಗವಾಗಿ ಜನರಿಂದ ಒಂದು ನೋಟು ಕೊಡಿ, ಒಂದು ಓಟೂ ಕೊಡಿ ಅಭಿಯಾನವನ್ನು ಡಿಸೆಂಬರ್ 12ರಿಂದ ಆರಂಭಿಸಲಾಗಿದ್ದು, ಜನವರಿ 15ರವರೆಗೆ ನಡೆಯಲಿದೆ ಎಂದರು.

ಮಾಯವತಿ ಅವರನ್ನು ದೇಶದ ಪ್ರಧಾನಿಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ, ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ. ಇದಕ್ಕೆ ಬಂಡವಾಳ ಶಾಹಿಗಳಿಂದ ಹಾಗೂ ಉದ್ಯಮಿಗಳಿಂದ ಧನಸಹಾಯ ಪಡೆದುಕೊಳ್ಳದೇ ಜನಸಾಮಾನ್ಯರಿಗಾಗಿ ಸರ್ಕಾರ ರಚನೆ ಮಾಡಲು ಜನಸಾಮಾನ್ಯರಿಂದಲೇ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ದೇಶದಲ್ಲಿ ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ ದೇಶ ಲೂಟಿ ಮಾಡಲಾಗಿದೆ. ಬಡತನ, ಅಪೌಷ್ಠಿಕತೆ, ದೌರ್ಜನ್ಯ, ಅತ್ಯಾಚಾರ ಇನ್ನೂ ನಿಂತಿಲ್ಲ. ಬಿಜೆಪಿಯ ವಿಶ್ವಾಸವಿಟ್ಟು ಜನರು ಅಧಿಕಾರಕ್ಕೆ ತಂದರೆ ಬಿಜೆಪಿಯೂ ಭಿನ್ನವಾಗಿಲ್ಲ. ಸುಳ್ಳುಗಳ ಸರದಾರರಾಗಿರುವ ಬಿಜೆಪಿಯವರು ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲ್ಲ ಎಂದು ದೂರಿದರು.

ಮುಖಂಡರಾದ ವೈ.ನರಸಪ್ಪ, ಹನುಮಂತಪ್ಪ ಅತ್ತನೂರು, ಬಸವರಾಜ ಭಂಡಾರಿ, ನರಸಿಂಹಲು, ಗೋವಿಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.