ADVERTISEMENT

ಮಾನ್ವಿ: ಮತದಾನಕ್ಕೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 9 ಮೇ 2023, 14:31 IST
Last Updated 9 ಮೇ 2023, 14:31 IST
ಮಾನ್ವಿಯಲ್ಲಿ ಮಂಗಳವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮತಯಂತ್ರ ಮತ್ತಿತರ ಸಾಮಾಗ್ರಿಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದರು
ಮಾನ್ವಿಯಲ್ಲಿ ಮಂಗಳವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮತಯಂತ್ರ ಮತ್ತಿತರ ಸಾಮಾಗ್ರಿಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದರು   

ಮಾನ್ವಿ: ಮೇ10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕಾಗಿ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಗಳವಾರ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಮತಯಂತ್ರ ಮತ್ತಿತರ ಸಾಮಾಗ್ರಿಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದರು.

ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಒಟ್ಟು 276ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿದಂತೆ ಒಟ್ಟು 6ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರ ಮೀಸಲು ಪಡೆಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತಿದೆ.

ಮಾನ್ವಿ ಪಟ್ಟಣದಲ್ಲಿ ಅಂಗವಿಕಲರಿಗಾಗಿ ಪಟ್ಟಣದ ಎ.ಪಿ.ಎಂ.ಸಿ. ಭವನದಲ್ಲಿ ವಿಶೇಷ ಚೇತನ ಸ್ನೇಹಿ ಮತಗಟ್ಟೆ, ಮನೋರಂಜನಾ ಕೇಂದ್ರದಲ್ಲಿ ಮಹಿಳಾ ವಿಶೇಷ ಪಿಂಕ್ ಮತಗಟ್ಟೆ, ಪುರಸಭೆ ಕಚೇರಿ ಮತಗಟ್ಟೆಯನ್ನು ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.