
ಸಿರವಾರ: ರೈತರ ಸಂಭ್ರಮದ ಹಬ್ಬವಾದ ಎಳ್ಳ ಅಮವಾಸ್ಯೆ ಅಂಗವಾಗಿ ರೈತರು ಮತ್ತು ರೈತ ಕುಟುಂಬದವರು ಜಮೀನುಗಳಿಲ್ಲಿ ಚರಗ ಚೆಲ್ಲಿ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ರೈತರು ತಮ್ಮ ಮನೆಗಳಲ್ಲಿ ಹೋಳಿಗೆ, ಅನ್ನ, ಸಾರು ಸೇರಿದಂತೆ ವಿಶೇಷ ಅಡುಗೆ ತಯಾರಿಸಿಕೊಂಡು ಕುಟುಂಬದ ಸಮೇತರಾಗಿ ಜಮೀನುಗಳಿಗೆ ತೆರಳಿ ಐದು ಕಲ್ಲುಗಳನ್ನು ಇಟ್ಟು ಪಂಚ ಪಾಂಡವರನ್ನು ನೆನೆದು ಪೂಜಿಸಿ, ನೈವೇದ್ಯ ಸಮರ್ಪಿಸಿ, ಹೊಲದಲ್ಲೆಲ್ಲಾ ನೈವೇದ್ಯವನ್ನು ಚರಗ ಚೆಲ್ಲುವ ಮೂಲಕ ಪೂಜೆ ಸಲ್ಲಿಸಲಾಯಿತು.
ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗಲಿ, ಮುಂದಿನ ಬೆಳೆ ಸಮೃದ್ಧವಾಗಿ ಬೆಳೆಯಲಿ, ಭೂತಾಯಿ ಸಂಪನ್ನವಾಗಿರಲಿ ಎಂದು ಪ್ರಾರ್ಥಿಸಲಾಯಿತು. ನಂತರ ಮನೆಯಿಂದ ತಂದಂತಹ ಅಡುಗೆಯನ್ನು ಸಾಮೂಹಿಕವಾಗಿ ಊಟ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.