ದೇವದುರ್ಗ: ರಸ್ತೆ ಬದಿ ‘ಶರಣರಿಗೊಂದು ಸಸಿ’ ನೆಡುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮತ್ತು ಸಂರಕ್ಷಣೆ ಬಗ್ಗೆ ಯುವ ಬ್ರಿಗೇಡ್ ಅರಿವು ಮೂಡಿಸುತ್ತಿದೆ.
ತಾಲ್ಲೂಕಿನ ಗಬ್ಬೂರಿನ ಯುವ ಬ್ರಿಗೇಡ್‌ನ ಕಾರ್ಯಕರ್ತರು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರಿ ಜಾಗ, ಖಾಸಗಿ ಬಡಾವಣೆ ಮತ್ತು ರಸೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.
ಯುವಕರು ಪ್ರತಿ ಬಾನುವಾರ ಶ್ರಮದಾನದ ಹಮ್ಮಿಕೊಳ್ಳುತ್ತಾರೆ. 193ನೇ ವಾರದ ಶ್ರಮದಾನ ಭಾಗವಾಗಿ ಶರಣರಿಗೊಂದು ಒಂದು ಸಸಿ ಎಂದು ಅಭಿಯಾನ ಹಮ್ಮಿಕೊಂಡು ರಸ್ತೆ ಬದಿಯ ವಿವಿಧ ಜಾತಿ ಸಸಿಗಳನ್ನು ನಾಟಿ ಮಾಡಿ ಆ ಸಸಿಗಳಿಗೆ ಶರಣರ ಹೆಸರಿಟ್ಟು ಪೋಷಿಸುತ್ತಿದ್ದಾರೆ.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ. ತಮ್ಮ ಮಕ್ಕಳ ಹೆಸರಿನಲ್ಲಿ ಸಸಿ ನೆಟ್ಟು, ಗಿಡ, ಮರಗಳನ್ನು ರಕ್ಷಿಸಿ ಆರೋಗ್ಯಕರ ಸಮಾಜ ನಿರ್ಮಿಸಬೇಕು. ಭೂಮಿಯ ತಾಪಮಾನ ಹೆಚ್ಚಾಗಿ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನ ನಿಯಂತ್ರಿಸಿ ಪರಿಸರದ ಸಮತೋಲನ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಗಿಡ, ಮರ ಬೆಳೆಸಬೇಕಾಗಿದೆ’ ಎನ್ನುವುದು ಬ್ರಿಗೇಡ್ ಕಾರ್ಯಕರ್ತರ ಮಾತು.
ನಮ್ಮ ಸುತ್ತಲಿರುವ ಪರಿಸರ ಶೇ70ರಷ್ಟು ಕಲುಷಿತಗೊಂಡಿದೆ. ಹೆಚ್ಚು ಗಿಡ ಮರಗಳನ್ನು ಬೆಳಸುವ ಮೂಲಕ ನೈಸರ್ಗಿಕ ಆಮ್ಲಜನಕ ಉತ್ಪಾದನೆಗೆ ಒತ್ತು ನೀಡಬೇಕುರವಿ ಶುಕ್ಲಾ ಗಬ್ಬೂರು
ಮಳೆಗಾಲದ ಹಿನ್ನೆಲೆಯಲ್ಲಿ ಎರೆಡು ವಾರದಿಂದ ಶರಣರಿಗೊಂದು ಸಸಿ ಅಭಿಯಾನದ ಮೂಲಕ ಸುಮಾರು 300ಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಿ ಪೋಷಿಸುತ್ತದ್ದೇವೆಚನ್ನು ಚಿಕ್ಕಮಠ ಸಂಚಾಲಕ ಯುವ ಬ್ರಿಗೇಡ್
ಯುವ ಬ್ರಿಗೇಡ್‌ನ ಸಮಾಜ ಸೇವೆ ಮತ್ತು ಪರಿಸರ ಪ್ರಜ್ಞೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ. ಶುದ್ಧ ಪರಿಸರ ಬಳುವಳಿಯಾಗಿ ಕೊಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯಬೂದಿ ಬಸವೇಶ್ವರ ಸ್ವಾಮಿ ಬೂದಿ ಬಸವೇಶ್ವರ ಸಂಸ್ಥಾನ ಮಠ ಗಬ್ಬೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.