ಸಿರವಾರ: ‘ಪರಿಸರ ಮಾಲಿನ್ಯಕ್ಕೆ ನಾವೇ ಕಾರಣರಾಗಿದ್ದು, ಅದನ್ನು ಸರಿಪಡಿಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಸಸಿ ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಲಯನ್ಸ್ ಕ್ಲಬ್‌ನ ಎನ್.ಉದಯಕುಮಾರ ಹೇಳಿದರು.
ಪಟ್ಟಣದಲ್ಲಿ ಲಯನ್ಸ್ ಕ್ಲಬ್, ಪಟ್ಟಣ ಪಂಚಾಯಿತಿ, ಮಾನ್ವಿಯ ಸಾಮಾಜಿಕ ಅರಣ್ಯ ವಿಭಾಗದ ಸಂಯೋಗದೊಂದಿಗೆ ಶನಿವಾರ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಜ್ಯೋತಿ ಮಾತನಾಡಿ,‘
ಮಾಲಿನ್ಯ ರಹಿತ ಸಮಾಜ ನಿರ್ಮಾಣಕ್ಕೆ ಸಸಿ ನೆಡುವ ಸಂಕಲ್ಪ ಮಾಡಬೇಕು. ಒಬ್ಬೊಬ್ಬರು ಒಂದು ಸಸಿ ನೆಟ್ಟು ಪೋಷಿಸಿ ಹಸಿರು ಸಿರವಾರ ಮಾಡಲು ಶ್ರಮಿಸೋಣ’ ಎಂದರು.
ಪಟ್ಟಣದ ರಸ್ತೆ ವಿಭಜಕದ ಮಧ್ಯದಲ್ಲಿ 500 ಸಸಿಗಳನ್ನು ನೆಡಲಾಯಿತು.
ಲಯನ್ಸ್ ಕ್ಲಬ್‌ನ ವಿಭಾಗೀಯ ಚೇರ್‌ಪರ್ಸನ್ ಪೆರಿಟಾಲ್ ರಾಮು, ಜನರಲ್ ಸೆಕ್ರೆಟರಿ ಮಲ್ಲಿಕಾರ್ಜುನ ಬಾಳಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗಣೇಕಲ್ ವೀರೇಶ, ಆರ್.ಕೆ.ಬಸವರಾಜ, ಪಿಎಸ್ಐ ಅಮರೇಗೌಡ ಗಿಣಿವಾರ, ಪ.ಪಂ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮಿ ಆದೆಪ್ಪ, ಕೃಷ್ಣ ನಾಯಕ, ಎಚ್.ಮಾರ್ಕಪ್ಪ, ಕುರುಕುಂದಿ ಸಿದ್ದನಗೌಡ, ಅರಿಕೇರಿ ಶಿವಶರಣ, ನರಸಿಂಹರಾವ್ ಕುಲಕರ್ಣಿ, ಸುರೇಶ ಪಾಟೀಲ ಶಾಖಾಪುರ, ಜ್ಞಾನಮಿತ್ರ, ಎಂ.ನಿಂಬಯ್ಯ ಸ್ವಾಮಿ, ಪತ್ತಾರ ನಾಗಪ್ಪ, ಮಾಣಿಕ ಶೆಟ್ಟಿ, ಮಹೇಂದ್ರ ಪಟೇಲ, ವೆಂಕಟೇಶ ದೊರೆ, ಗಡ್ಲ ಚನ್ನಬಸವ, ಶಾಂತಪ್ಪ ಪಿತಗಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.