ADVERTISEMENT

’350 ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 9:27 IST
Last Updated 1 ಮಾರ್ಚ್ 2020, 9:27 IST
ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ಎರಡು ದಿನಗಳವರೆಗೆ ಆಯೋಜಿಸಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ವಿವಿಧೆಡೆಯಿಂದ ಜನರು ಭಾಗಿಯಾಗಿದ್ದರು 
ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ಎರಡು ದಿನಗಳವರೆಗೆ ಆಯೋಜಿಸಿದ್ದ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ವಿವಿಧೆಡೆಯಿಂದ ಜನರು ಭಾಗಿಯಾಗಿದ್ದರು    

ರಾಯಚೂರು:ಜನಸಾಮಾನ್ಯರಿಗಾಗಿ ಹಮ್ಮಿಕೊಂಡಿರುವ ನೇತ್ರ ಶಸ್ತ್ರ ಚಿಕಿತ್ಸೆಯ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೇಳಿದರು.

ನಗರದ ಲಯನ್ಸ್‌ಕ್ಲಬ್‌ನಲ್ಲಿ ಶ್ರೀ ವಿವೇಕಾನಂದ ಸೇವಾಶ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರ ನಿಯಂತ್ರಣ ವಿಭಾಗ, ಓಪೆಕ್ ಹಾಗೂ ರಿಮ್ಸ್ ಆಸ್ಪತ್ರೆಯಿಂದ ಒಪೆಕ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎರಡು ದಿನದ ಶಿಬಿರದಲ್ಲಿ ಒಟ್ಟು 489 ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 350 ಜನರಿಗೆ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಶಿಬಿರದ ಸಂಪೂರ್ಣ ವೆಚ್ಚವನ್ನು ಪೃಥ್ವಿರಾಜ ಗದಾಲೆ ಕುಟುಂಬದವರು ಭರಿಸಿದ್ದಾರೆ. ಅವರು ಏರ್ಪಡಿಸಿದ 7ನೇ ಶಿಬಿರವಾಗಿದೆ ಎಂದರು.

ADVERTISEMENT

ಒಪೆಕ್ ಆಸ್ಪತ್ರೆ ವಿಶೇಷ ಅಧಿಕಾರಿ ಡಾ. ಗದ್ವಾಲ ನಾಗರಾಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯ ಶಂಕರ, ಡಾ. ನಂದಿತಾ, ಲಯನ್ಸ್‌ಕ್ಲಬ್‌ ಅಧ್ಯಕ್ಷ ಡಾ.ಸುರೇಶ ವಿ.ಸಗರದ್, ಡಾ. ಬಸವರಾಜ ಗಡ್ಡಿನ, ಲಯನ್ಸ ಕ್ಲಬ್‌ನ ಕಾರ್ಯದರ್ಶಿ ಡಾ. ವೆಂಕಟೇಶ ನಾಯಕ, ಡಾ. ಲಯನ್ ರಾಘವೇಂದ್ರ, ತಾಲ್ಲೂಕು ಮೇಲ್ವಿಚಾರಕ ರಂಗರಾವ್ ಕುಲಕರ್ಣಿ ಐಕೂರ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ, ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.