
ಪ್ರಜಾವಾಣಿ ವಾರ್ತೆಅಪಘಾತ
–ಪ್ರಾತಿನಿಧಿಕ ಚಿತ್ರ
ರಾಯಚೂರು: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಸೋಮವಾರ ರಸ್ತೆ ಬದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ತಂದೆ, ಮಗನ ಮೇಲೆ ಲಾರಿ ಹಾಯ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯರಮರಸ್‌ನ ಮಿಚ್ಚರ್ ನಾಗಪ್ಪ (65) ಹಾಗೂ ಮಗ ಮಿಚ್ಚರ್ ರಮೇಶ (36) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಮೇಶನ ಹೊಟ್ಟೆ ಮೇಲೆ ಲಾರಿ ಹಾಯ್ದು ದೇಹ ತುಂಡಾಗಿದೆ. ಲಾರಿ ಬೈಪಾಸ್ ರಸ್ತೆಯಿಂದ ಶಕ್ತಿನಗರದ ಕಡೆಗೆ ಹೊರಟಿತ್ತು. ಎಡ ಬದಿಗೆ ತಿರುವಿನಲ್ಲಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ರಸ್ತೆ ಬದಿಗೆ ನಿಂತಿದ್ದ ವ್ಯಕ್ತಿ ಮೇಲೆ ಲಾರಿ ಹರಿದಿದೆ.
ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.