ADVERTISEMENT

ಸಿಂಧನೂರು: ಅಧಿಕಾರಿಗಳ ದಾಳಿ, ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:14 IST
Last Updated 21 ಮೇ 2025, 14:14 IST
ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಆಹಾರ ಇಲಾಖೆ ನಿರೀಕ್ಷಕ ಹನುಮೇಶ ನಾಯಕ ಬುಧವಾರ ದಾಳಿ ನಡೆಸಿ ಅಕ್ಕಿ ವಶಕ್ಕೆ ಪಡೆದುಕೊಂಡರು
ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಆಹಾರ ಇಲಾಖೆ ನಿರೀಕ್ಷಕ ಹನುಮೇಶ ನಾಯಕ ಬುಧವಾರ ದಾಳಿ ನಡೆಸಿ ಅಕ್ಕಿ ವಶಕ್ಕೆ ಪಡೆದುಕೊಂಡರು   

ಸಿಂಧನೂರು: ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮುಂದೆ ಅಕ್ರಮವಾಗಿ ಅಕ್ಕಿ ಖರೀದಿ ಮಾಡುವವರ ಮೇಲೆ ದಾಳಿ ಮಾಡಿ ಪಡಿತರ ಅಕ್ಕಿ ವಶಪಡಿಸಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ನಡೆದಿದೆ.

ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಕೆ.ಗೋಪಾಲರಾವ್ ನ್ಯಾಯಬೆಲೆ ಅಂಗಡಿ ಸಂಖ್ಯೆ-134 ಮುಂದೆ ಅಕ್ರಮವಾಗಿ ಅಕ್ಕಿ ಖರೀದಿ ಮಾಡುವ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಆಹಾರ ಇಲಾಖೆ ನಿರೀಕ್ಷಕ ಹನಮೇಶ ನಾಯಕ ದಿಢೀರನೇ ಭೇಟಿ ನೀಡಿ ಅಕ್ರಮವಾಗಿ ಖರೀದಿ ಮಾಡುತ್ತಿದ್ದವರಿಂದ ಪಡಿತರ ಅಕ್ಕಿ ವಶಪಡಿಸಿಕೊಂಡು ಇನ್ನು ಮುಂದೆ ಈ ರೀತಿ ಆಗದಂತೆ ಅಂಗಡಿ ಸಂಚಾಲಕರಿಗೆ ಎಚ್ಚರಿಕೆ ನೀಡಿದರು.

ಆಹಾರ ನಿರೀಕ್ಷಕ ಹನಮೇಶ ನಾಯಕ ಅವರು ಮಹಿಳೆಯಿಂದ ಅಕ್ಕಿ ಚೀಲ ವಶಪಡಿಸಿಕೊಂಡಿದ್ದು ಇದನ್ನು ನೋಡಿದ ಕೆಲವರು ಅಕ್ಕಿ ಚೀಲಗಳ ಸಮೇತ ಓಡಿ ಹೋದ ದೃಶ್ಯ ಕಂಡು ಬಂದಿತು. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.