ADVERTISEMENT

ಸಹಕಾರ ಸಂಘದಿಂದ ಶಿಕ್ಷಕರಿಗೆ ಆಹಾರಧಾನ್ಯ

​ಪ್ರಜಾವಾಣಿ ವಾರ್ತೆ
Published 30 ಮೇ 2021, 11:05 IST
Last Updated 30 ಮೇ 2021, 11:05 IST
ಮಸ್ಕಿಯಲ್ಲಿ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರ ಸಂಘದಿಂದ ಶಿಕ್ಷಕರಿಗೆ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು
ಮಸ್ಕಿಯಲ್ಲಿ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರ ಸಂಘದಿಂದ ಶಿಕ್ಷಕರಿಗೆ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು   

ಮಸ್ಕಿ: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಶಾಲಾ–ಕಾಲೇಜುಗಳ ಶಿಕ್ಷಕರಿಗೆ ಪಟ್ಟಣದ ಅಕ್ಷಾಂಬರ ಪತ್ತಿನ ಸೌಹಾರ್ದ ಸಹಕಾರ ಸಂಘದಿಂದ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಭಾನುವಾರ ಕಿಟ್‌ಗಳನ್ನು ವಿತರಿಸಿದರು.

ಸಹಕಾರ ಸಂಘದ ಕಚೇರಿ ಎದುರು ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ವರರುದ್ರಮುನಿ ಸ್ವಾಮೀಜಿ,‘ಕೊರೊನಾ ಸಂಕಷ್ಟದಲ್ಲಿ ತೊಂದರೆಗೆ ಒಳಗಾದ ಶಿಕ್ಷಕರಿಗೆ ಆಹಾರಧಾನ್ಯ ವಿತರಿಸುವ ಮೂಲಕ ಅಕ್ಷಾಂಬರ ಸಹಕಾರ ಸಂಘ ಉತ್ತಮ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

ಪಟ್ಟಣದ 101 ಶಿಕ್ಷಕರಿಗೆ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಸಹಕಾರ ಸಂಘದ ಅಧ್ಯಕ್ಷ ಸೂಗಣ್ಣ ಬಾಳೇಕಾಯಿ, ಗುರುರಾಜ ಹಂಚಿನಾಳ, ಸುರೇಶ ಅರಳಿ, ಸಂತೋಷ ಬಾಳೇಕಾಯಿ, ಬಸವರಾಜ ನಾಯಕ ಕಡಬೂರು ಸೇರಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.