ADVERTISEMENT

ಮಾನ್ವಿ: ಕೊನೊಕಾರ್ಪಸ್ ಗಿಡಗಳ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 14:20 IST
Last Updated 3 ಆಗಸ್ಟ್ 2024, 14:20 IST
ಮಾನ್ವಿಯಲ್ಲಿ ಶನಿವಾರ ಜನಸೇವಾ ಫೌಂಡೇಶನ್ ಪದಾಧಿಕಾರಿಗಳು ಶಿರಸ್ತೇದಾರ ವಿನಾಯಕರಾವ್ ಅವರಿಗೆ ಮನವಿ ಸಲ್ಲಿಸಿದರು
ಮಾನ್ವಿಯಲ್ಲಿ ಶನಿವಾರ ಜನಸೇವಾ ಫೌಂಡೇಶನ್ ಪದಾಧಿಕಾರಿಗಳು ಶಿರಸ್ತೇದಾರ ವಿನಾಯಕರಾವ್ ಅವರಿಗೆ ಮನವಿ ಸಲ್ಲಿಸಿದರು   

ಮಾನ್ವಿ: ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಾಜ್ಯ ಹೆದ್ದಾರಿಯ ವಿಭಜಕದ (ಡಿವೈಡರ್) ಮೇಲೆ ನೆಡಲಾಗಿರುವ ಕೊನೊಕಾರ್ಪಸ್ ತಳಿಯ ಗಿಡಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜನಸೇವಾ ಫೌಂಡೇಶನ್ ಪದಾಧಿಕಾರಿಗಳು ಶನಿವಾರ ಪಟ್ಟಣದಲ್ಲಿ ಶಿರಸ್ತೇದಾರ ವಿನಾಯಕರಾವ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಾದ್ಯಂತ ನಗರ, ಪಟ್ಟಣಗಳ ರಾಜ್ಯ ಹೆದ್ದಾರಿಯ ವಿಭಜಕಗಳ ಮೇಲೆ ಹಾಗೂ ಸರ್ಕಾರಿ ಇಲಾಖೆಗಳ ಆವರಣಗಳಲ್ಲಿ ಕೊನೊಕಾರ್ಪಸ್ ತಳಿಯ ಗಿಡಗಳನ್ನು ನೆಡಲಾಗಿದೆ. ಕೊನೊಕಾರ್ಪಸ್ ಗಿಡವು ವಿಷಕಾರಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದು, ಇದರ ಆಮ್ಲಜನಕವನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ಹಾಗೂ ಹೃದಯಾಘಾತಕ್ಕೆ ಎಡೆಮಾಡಿಕೊಡುತ್ತದೆ. ಈ ಗಿಡಗಳ ಬೀಜಗಳು ನೆಲದ ಮೇಲೆ ಬಿದ್ದು ವೇಗವಾಗಿ ಬೆಳೆಯುತ್ತದೆ. ಗುಜರಾತ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಗಿಡಗಳನ್ನು ನೆಡಲು ನಿಷೇಧಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಕಚೇರಿ ಆವರಣಗಳಲ್ಲಿ ಈ ಗಿಡಗಳು ಯತೇಚ್ಛವಾಗಿ ಅರಣ್ಯ ಇಲಾಖೆಯಿಂದ ಬೆಳೆಸಲಾಗಿದೆ. ಕೊನೊಕಾರ್ಪಸ್ ತಳಿಯ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಯಿತು.

ಜನಸೇವಾ ಫೌಂಡೇಶನ್ ಅಧ್ಯಕ್ಷ ಜಾವೀದ್ ಖಾನ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.