ADVERTISEMENT

ಗರ್ಭಧರಿಸುವ ಆರಂಭದಲ್ಲೆ ವೈಪರೀತ್ಯ ಪತ್ತೆ ಸಾಧ್ಯ: ಡಾ ಶೃತಿ ರೆಡ್ಡಿ

ಮಹಿಳೆಯರೊಂದಿಗೆ ಸ್ತ್ರೀ ರೋಗ ತಜ್ಞರ ಸಂವಾದ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 13:28 IST
Last Updated 24 ಸೆಪ್ಟೆಂಬರ್ 2018, 13:28 IST
ರಾಯಚೂರಿನ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ) ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ತ್ರೀ ರೋಗ ತಜ್ಞರ ಕಾರ್ಯಾಗಾರದಲ್ಲಿ ಡಾ. ದೀಪಿಕಾ ಸಾಯಿ ಮಾತನಾಡಿದರು
ರಾಯಚೂರಿನ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ) ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ತ್ರೀ ರೋಗ ತಜ್ಞರ ಕಾರ್ಯಾಗಾರದಲ್ಲಿ ಡಾ. ದೀಪಿಕಾ ಸಾಯಿ ಮಾತನಾಡಿದರು   

ರಾಯಚೂರು:ಮಹಿಳೆಯರು ಗರ್ಭಧರಿಸುವ ಆರಂಭದ ದಿನಗಳಲ್ಲೆ ಭ್ರೂಣದಲ್ಲಿ ಗುರುತಿಸಲು ಸಾಧ್ಯವಾಗುವ ವಿವಿಧ ವೈಪರೀತ್ಯಗಳನ್ನು ಪತ್ತೆ ಮಾಡಬಹುದು ಎಂದು ಸ್ತ್ರೀ ರೋಗ ತಜ್ಞೆ ಡಾ. ಶೃತಿ ರೆಡ್ಡಿ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ) ಸಭಾಂಗಣದಲ್ಲಿ ರಾಯಚೂರಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿ, ಬರ್ತ್‌ರೈಟ್‌ ಬೈ ರೇನ್‌ಬೋ ಮಕ್ಕಳ ಆಸ್ಪತ್ರೆ ಹಾಗೂ ಹೈದರಾಬಾದ್‌ ಸ್ತ್ರೀ ರೋಗ ತಜ್ಞರ ತಂಡದಿಂದ ಭಾನುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು

ಗರ್ಭಪಾತಕ್ಕೆ ಹಲವಾರು ಕಾರಣಗಳಿವೆ. ದೈಹಿಕ ವಿರೂಪ, ಆನುವಂಶಿಕ ನ್ಯೂನತೆಗಳು, ಕ್ರೊಮೊಜೋಮ್ ದೋಷಗಳು ಕೂಡಾ ಕಾರಣವಾಗುತ್ತವೆ. ಕಾರಣವನ್ನು ಆರಂಭದಲ್ಲೆ ನಿಖರವಾಗಿ ಪತ್ತೆ ಮಾಡಬಹುದು ಹಾಗೂ ಗುಣಪಡಿಸುವುದಕ್ಕೆ ಸಾಧ್ಯ ಎಂದರು.

ADVERTISEMENT

ಭ್ರೂಣದ ಅಸಹಜ ಬೆಳವಣಿಗೆ ತಡೆಗಟ್ಟಲು ಗರ್ಭಿಣಿಯರು ನಿಯಮಿತವಾಗಿ ಆಹಾರ ಸೇವನೆ ಮಾಡಬೇಕು. ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಅಸಹಜತೆಯನ್ನು ತಡೆಗಟ್ಟಬಹುದು. ಶಸ್ತ್ರಚಿಕಿತ್ಸೆ ಬದಲು ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಹೆಚ್ಚು ಮಹತ್ವ ಕೊಡಬೇಕು. ಗರ್ಭಿಣಿಯರು ಭ್ರೂಣದ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.

ಶಿಶು ಜನಿಸಿದ ಆರು ತಿಂಗಳಿನವರೆಗೂ ಸ್ತನ್ಯಪಾನ ಮಾಡಿಸಬೇಕು. ಈ ಬಗ್ಗೆ ಯಾವುದೇ ತಪ್ಪು ಗ್ರಹಿಕೆಗಳನ್ನು ಇಟ್ಟುಕೊಳ್ಳಬಾರದು. ಶಿಶುವಿನ ಆರೋಗ್ಯ ಉತ್ತಮವಾಗಿರಲು ಇದು ಮುಖ್ಯವಾಗಿರುತ್ತದೆ ಎಂದು ಮನವರಿಕೆ ಮಾಡಿದರು.

ಪ್ರತಿ ತಿಂಗಳು ತಾಯಿ, ಶಿಶುವಿನ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ತಾಯಿಯು ಆರೋಗ್ಯವಾಗಿದ್ದು ಜನಿಸುವ ಶಿಶು ಕೂಡಾ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರಾಯಚೂರಿನ ಸ್ತ್ರೀ ರೋಗ ಶಾಸ್ತ್ರ ಸೊಸೈಟಿಯ ಅಧ್ಯಕ್ಷೆ ಡಾ. ಶ್ರೀಲತಾ ಆರ್ ಪಾಟೀಲ, , ಕಾರ್ಯದರ್ಶಿ ಡಾ. ಜಯಪ್ರಕಾಶ್ ಬಿ. ಪಾಟೀಲ, ರಾಯಚೂರಿನ ಅಬ್ಸ್ಟೆಟ್ರಿಕ್ಸ್ & ಗೈನೆಕಾಲಜಿ ಸೊಸೈಟಿಯ ಡಾ. ಪ್ರಣತಿ ರೆಡ್ಡಿ, ಮೆಟರ್ನಲ್ & ಫೆಟಲ್ ಮೆಡಿಸಿನ್ ಕ್ಲಿನಿಕಲ್ ಡೈರೆಕ್ಟರ್ ಡಾ. ಶೃತಿ ರೆಡ್ಡಿ, ಡಾ. ದೀಪಿಕಾ ಸಾಯಿ, ಡಾ. ಭಾರ್ಗವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.