ADVERTISEMENT

ಬೀದಿಬದಿ ವರ್ತಕರಿಗೆ ಕಿರುಕುಳ; ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 5:53 IST
Last Updated 6 ಜನವರಿ 2022, 5:53 IST
ಲಿಂಗಸುಗೂರ ಬಸ್ ನಿಲ್ದಾಣದ ಬಳಿಯ ಬೀದಿಬದಿ ವರ್ತಕರಿಗೆ ರಕ್ಷಣೆ ನೀಡುವಂತೆ ಬೀದಿಬದಿ ವ್ಯಾಪಾರಿಗಳ ಮಹಾಮಂಡಲದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ ಅವರಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರ ಬಸ್ ನಿಲ್ದಾಣದ ಬಳಿಯ ಬೀದಿಬದಿ ವರ್ತಕರಿಗೆ ರಕ್ಷಣೆ ನೀಡುವಂತೆ ಬೀದಿಬದಿ ವ್ಯಾಪಾರಿಗಳ ಮಹಾಮಂಡಲದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ಬಸ್‍ ನಿಲ್ದಾಣಕ್ಕೆ ಹೊಂದಿ ಕೊಂಡ ಬೀದಿಬದಿ ವ್ಯಾಪಾರಿ ಗಳಿಂದ ತೊಂದರೆ ಆಗುತ್ತಿದೆ ಎಂದು ಸುಳ್ಳು ದೂರು ನೀಡಿ ಕಿರುಕುಳ ನೀಡುವುದನ್ನು ತಡೆಯುವಂತೆ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿ ಗಳ ಮಹಾಮಂಡಲದ ತಾಲ್ಲೂಕು ಘಟಕ ಪದಾಧಿಕಾರಿಗಳು ಕೋರಿದರು.

ಬುಧವಾರ ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ ಅವರಿಗೆ ಮನವಿ ಸಲ್ಲಿಸಿದರು.

ಈಚೆಗೆ ಬಸ್‍ ನಿಲ್ದಾಣದ ಅಂಗಡಿ ಮಾಲೀಕರು ಬೀದಿಬದಿ ವ್ಯಾಪಾರಿಗಳ ವಿರುದ್ಧ ದೂರು ಸಲ್ಲಿಸುತ್ತಿದ್ದಾರೆ. ಮಳಿಗೆಗಳ ಮುಂಭಾಗದ ತಡೆಗೋಡೆ ಹೊರಭಾಗದಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಇದಕ್ಕೆ ಮಳಿಗೆಗಳ ಮಾಲೀಕರು ತಡೆಯೊಡ್ಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದರು.

ADVERTISEMENT

ಬೀದಿಬದಿ ವ್ಯಾಪಾರದ ಗುರುತಿನ ಚೀಟಿ ಹೊಂದಿದ್ದೇವೆ. ಪುರಸಭೆಯು ಪ್ರಧಾನ ಮಂತ್ರಿ ರೋಜಗಾರ್ ಯೋಜನೆಯಡಿ ಸ್ವಯಂ ಉದ್ಯೋಗದಡಿ ಸಾಲ ಪಡೆದು ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಿ, ಜೀವನ ಸಾಗಿಸುತ್ತಿದ್ದೇವೆ ಎಂದರು.

ರಸ್ತೆ ಬದಿಯ ತಡೆಗೋಡೆಯ ಹೊರಭಾಗದಲ್ಲಿ ಯಾರಿಗೂ ತೊಂದರೆ ಕೊಡದೆ ವ್ಯಾಪಾರ ಮಾಡುತ್ತಿದ್ದೇವೆ. ಸತ್ಯ ಅರಿತು, ಸುಳ್ಳು ದೂರುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಇಲ್ಲದೆ ಹೋದಲ್ಲಿ ವ್ಯಾಪಾರಿಗಳ ಸಹಯೋಗದಲ್ಲಿ ಬೀದಿಗಿ ಳಿದು ಹೋರಾಟ ಮಾಡುತ್ತೇವೆ ಎಂದರು.

ತಾಲ್ಲೂಕು ಅಧ್ಯಕ್ಷ ಮಹಿಬೂಬ್ ಪಾಶಾ, ಉಪಾಧ್ಯಕ್ಷ ಜಗನ್ನಾಥ ಜಾಧವ್‍, ಕಾರ್ಯದರ್ಶಿ ಹುಸೇನ್‌ಸಾಬ್‌ ಗಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.