ADVERTISEMENT

ಹಟ್ಟಿ ಚಿನ್ನದಗಣಿ: 25 ಜೋಡಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 11:41 IST
Last Updated 23 ಮಾರ್ಚ್ 2025, 11:41 IST
ಹಟ್ಟಿ ಸಮೀಪದ ‌ವಂದಲಿ ಹೊಸೂರು ಗ್ರಾಮದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಹಟ್ಟಿ ಸಮೀಪದ ‌ವಂದಲಿ ಹೊಸೂರು ಗ್ರಾಮದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.   

ಹಟ್ಟಿ ಚಿನ್ನದಗಣಿ: ವಂದಲಿ ಹೊಸೂರು ಗ್ರಾಮದಲ್ಲಿ ಉಟಕನೂರು ಶಿವಯೋಗಿಗಳ 19ನೇ ಜಾತ್ರೆ ಮಹೋತ್ಸವ ಹಾಗೂ ಅಂಕಲಿಗಿ ಅಡವಿಸಿದ್ದೇಶ್ವರ ಪುರಾಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 25 ಜೋಡಿ ನೂತನ ವಧು-ವರರು ದಾಂಪತ್ಯ ಜೀವನಕ್ಕೆ, ಕಾಲಿಟ್ಟರು.

ವಂದಲಿ ಹೊಸೂರು ಗ್ರಾಮದ ಅಮರಗುಂಡಪ್ಪ ತಾತಾ ಮಾತನಾಡಿ, ಇಂದಿನ ಯುಗದಲ್ಲಿ ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಮನುಷ್ಯ. ಉಸಿರಾಡುವ ಗಾಳಿ, ತಿನ್ನುವ ಆಹಾರ, ಕೂಡ ರಾಸಯನಿಕವಾಗಿವೆ. ಜೀವನ ಶೈಲಿಯು ಬದಲಾಗಿದೆ. ಮುಂದಿನ ಪಿಳಿಗೆಗೆ, ನೀರು,ಕಾಡು, ಭೂಮಿ, ಅಳಿವಿನ ಅಂಚಿನಲ್ಲಿ ಇವೆ ಇವುಗಳನ್ನು ಉಳಿಸಬೇಕಾಗಿದೆ ಎಂದರು.

ಉಟಗನೂರು ಮರಿಬಸವಲಿಂಗ ಮಠದ‌, ಬಸವರಾಜ ತಾತಾನವರು ಮಾತನಾಡಿ, ಈಗಿನ ಆಡಂಬರದ, ಜೀವನದಲ್ಲಿ ಇಂತಹ ಸಾಮೂಹಿಕ ವಿವಾಹಗಳು ನಡೆಸಿಕೊಂಡು ಬಂದಿರುವುದು ಸಂತಸದ ವಿಷಯ ಎಂದರು.

ADVERTISEMENT

ಗೌಡನ ಭಾವಿ ನಾಗಪ್ಪ ತಾತಾ , ಜಂಗರ ಹಳ್ಳಿ ಮಹಾಂತೇಶ ತಾತಾ, ಸೂಗಯ್ಯ ತಾತಾ, ವಂದಲಿ ಹೊಸೂರು, ಗ್ರಾಪಂ ಅಧ್ಯಕ್ಷ ಬೀರಾಳ ಬಸವರಾಜ, ಈಶ್ವರ ವಜ್ಜಲ್, ಸಿದ್ದನಗೌಡ ಮೂಡಲಗುಂಡ, ಮುಖಂಡರಾದ ಮುದಿಯಪ್ಪ, ಆನ್ವರಿ, ಗ್ರಾಮಸ್ಧರಾದ , ಯಮನಪ್ಪ ಯಲಗಟ್ಟಾ ಈರಪ್ಪ ಜಾಲಹಳ್ಳಿ ದುರುಗಪ್ಪ ಕುರಿ, ಹನುಮಯ್ಯ, ಗ್ರಾಪಂ ಸದಸ್ಯರಾದ ವಂದ್ಲಪ್ಪ, ಸಿದಣ್ಣ, ಹನುಮಯ್ಯ ಹುಡೆದ, ಗ್ರಾಮಸ್ಧರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.