ADVERTISEMENT

ಹಟ್ಟಿ ಚಿನ್ನದ ಗಣಿ: ಕರ ವಸೂಲಿಗೆ ಟೆಂಡರ್ ಕರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 13:51 IST
Last Updated 29 ಮಾರ್ಚ್ 2025, 13:51 IST
ಹಟ್ಟಿ ಪಟ್ಟಣದಲ್ಲಿ ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಹಟ್ಟಿ ಪಟ್ಟಣದಲ್ಲಿ ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಹಟ್ಟಿ ಚಿನ್ನದ ಗಣಿ: ಪಟ್ಟಣದ ಸಂತೆ‌ ಬಜಾರ್‌ನಲ್ಲಿ ಕರ ವಸೂಲಿಗೆ ಹರಾಜು ಕರೆಯಬೇಕು ಎಂದು ಡಾ.ಬಿಆರ್.ಅಂಬೇಡ್ಕರ್ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಪ.ಪಂ. ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

‘ಪಟ್ಟಣದ ಸಂತೆಯಿಂದ 40  ಗ್ರಾಮಗಳಿಗೆ ಅನುಕೂಲವಾಗಿದೆ. ಪ್ರತಿ ವರ್ಷ ಸಂತೆ ಕರ ವಸೂಲಿಗೆ ಟೆಂಡರ್ ಕರೆಯಲಾಗುತ್ತಿತ್ತು. ಆದರೆ ಈ ಬಾರಿ ಪ.ಪಂ. ಅಧ್ಯಕ್ಷ ಎಂ.ಡಿ.ಸಂಧಾನಿ ಅವರು ಹಿಂದೆ ಟೆಂಡರ್ ಪಡೆದವರ ಜೊತೆ ಹೊಂದಾಣಿಕೆ ಮಾಡಿಕೊಂಡು ಟೆಂಡರ್ ಮೊತ್ತವನ್ನು ಶೇ 10ರಷ್ಟು ಹೆಚ್ಚು ಮಾಡಿ ನೀಡಿದ್ದಾಋಎ. ಇದನ್ನು ತಡೆ ಹಿಡಿಯಬೇಕು’ ಎಂದು ಆಗ್ರಹಿಸಿದ್ದಾರೆ.

‘ನಿರ್ಲಕ್ಷ್ಯ ಮಾಡಿದರೆ ಪ.ಪಂ. ಕಚೇರಿಗೆ ಬೀಗ ಹಾಕಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಡಾ.ಬಿ.ಆರ್‌.ಅಂಬೇಡ್ಕರ್ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಚಿತ್ರನಾಳ, ಕಾರ್ಯದರ್ಶಿ ಸಿದ್ಧಾರೂಢ, ಉಪಾಧ್ಯಕ್ಷ ಶಿವಪುತ್ರ, ಶಿವಶರಣಯ್ಯ, ವೀರೇಶ, ಶ್ರೀಕಾಂತ ಹಾಗೂ ಮೌನೇಶ ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.