ADVERTISEMENT

ಹಟ್ಟಿ ಚಿನ್ನದ ಗಣಿ | ಸಂತೆ ಕರ: ₹ 2.79 ಲಕ್ಷಕ್ಕೆ ಹರಾಜು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:05 IST
Last Updated 18 ಡಿಸೆಂಬರ್ 2025, 5:05 IST
ಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ವಾರದ ಸಂತೆ ಕರ ವಸೂಲಿ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು
ಹಟ್ಟಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ವಾರದ ಸಂತೆ ಕರ ವಸೂಲಿ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ವಾರದ ಸಂತೆ ಕರ ಹರಾಜು ಬಹಿರಂಗ ಪ್ರಕ್ರಿಯೆ ಬುಧವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆಯಿತು.

2025–26ನೇ ಸಾಲಿನ ಸಂತೆ ಬಜಾರ ಕರ ₹ 2.79 ಲಕ್ಷಕ್ಕೆ ಹರಾಜು ಮಾಡಲಾಯಿತು. ಇದು 3 ತಿಂಗಳಿಗೆ ಅವಧಿಗೆ ಇರಲಿದೆ. ಗುತ್ತಿಗೆ ಪಡೆದ ಗುತ್ತಿಗೆದಾರ ಹರಾಜಿನಲ್ಲಿ ಇರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮುಖ್ಯಾಧಿಕಾರಿ ಜಗನಾಥ ತಿಳಿಸಿದರು.

ಒಟ್ಟು 14 ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮಹಮ್ಮದ್ ಫಾರೂಖ್ ಅತಿ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿದರು.

ADVERTISEMENT

ಈ ವೇಳೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಚಂದ್ರಶೇಖರ ಸೈಯದ್ ಅಕ್ರಮ್ ಇಸ್ಮಾಯಿಲ್ ಖಾದ್ರಿ, ರಾಮಪ್ಪ, ಸುನೀಲ್, ಅಜೀಮ್ ಪಾಶ ಅಮರೇಶ, ಹರಾಜುದಾರಾದ ಶಿವಪ್ರಸಾದ ನಾಯಕ, ರಾಜಕುಮಾರ, ಇಮಾಮ್ ಸಾಬ್‌, ಬುಡ್ನೆ ಸಾಬ್, ಶ್ರೀನಿವಾಸ, ವಿನೋದ ಕುಮಾರ, ಸಿರಾಜುದ್ದಿನ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.