ADVERTISEMENT

ಹಟ್ಟಿ ಚಿನ್ನದ ಗಣಿ: ಪೈಪ್‌ಲೈನ್ ದುರಸ್ತಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 11:18 IST
Last Updated 31 ಜನವರಿ 2025, 11:18 IST
ಹಟ್ಟಿ ಚಿನ್ನದ ಗಣಿ ಕೋಠಾ ಮುಖ್ಯ ರಸ್ತೆಯಲ್ಲಿ ಒಡೆದ ಪೈಪ್‌ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಶುಕ್ರವಾರ ದುರಸ್ತಿ ಮಾಡಿದರು
ಹಟ್ಟಿ ಚಿನ್ನದ ಗಣಿ ಕೋಠಾ ಮುಖ್ಯ ರಸ್ತೆಯಲ್ಲಿ ಒಡೆದ ಪೈಪ್‌ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಶುಕ್ರವಾರ ದುರಸ್ತಿ ಮಾಡಿದರು    

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಬಳಿ ಒಡೆದು ಪೈಪ್‌ಲೈನ್‌ ದುರಸ್ತಿ ಮಾಡಿಸಿ ಅಧಿಕಾರಿಗಳು ಕುಡಿಯುವ ನೀರು ವ್ಯಯವಾಗುವುದನ್ನು ತಡೆದಿದ್ದಾರೆ.

ಪೈಪ್‌ಲೈನ್‌ ಒಡೆದು ನೀರು ಪೋಲಾಗುತ್ತಿರುವ ಬಗ್ಗೆ ಜ.16ರಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.

ಪಟ್ಟಣ ಪಂಚಾಯಿತಿ ಆಡಳಿತ ಶುಕ್ರವಾರ ಪೈಪ್‌ಲೈನ್ ದುರಸ್ತಿ ಮಾಡಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಹಲವು ಸಲ ಪೈಪ್‌ಲೈನ್ ದುರಸ್ತಿ ಮಾಡಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.

ADVERTISEMENT

ಕೋಠಾ ಮುಖ್ಯ ರಸ್ತೆ ಹಾಗೂ ನೀರಿನ ಟ್ಯಾಂಕ್ ಹತ್ತಿರ ಸೇರಿದಂತೆ ಹಲವು ಕಡೆ ಪೈಪ್‌ಲೈನ್ ಒಡೆದಿತ್ತು. ಹೊಸ ಪೈಪ್ ಹಾಕಿ ನೀರು ಪೋಲಾಗದಂತೆ ದುರಸ್ತಿ ಮಾಡಲಾಗಿದೆ.‌ ಬೇಸಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನಾಥ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.