ADVERTISEMENT

ಹಟ್ಟಿ ಚಿನ್ನದ ಗಣಿ | ಕೆಸರು ಗದ್ದೆಯಾದ ಡಾಂಬರ್ ರಸ್ತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:55 IST
Last Updated 25 ಅಕ್ಟೋಬರ್ 2025, 4:55 IST
ಹಟ್ಟಿ ಚಿನ್ನದ ಗಣಿ ಪಟ್ಟಣದ ರಾಮ್ ರಹೀಮ್ ಕಾಲೊನಿಯ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದೆ
ಹಟ್ಟಿ ಚಿನ್ನದ ಗಣಿ ಪಟ್ಟಣದ ರಾಮ್ ರಹೀಮ್ ಕಾಲೊನಿಯ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದೆ   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಹಾಗೂ ವಿವಿಧ ಗ್ರಾಮದಲ್ಲಿ ಗುರುವಾರ ರಾತ್ರಿ ಮಳೆಯಾಗಿದ್ದು ಪಟ್ಟಣದ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.

ಹಟ್ಟಿ ಪಟ್ಟಣದ 13ನೇ ವಾರ್ಡ್‌ನ ರಾಮ್ ರಹೀಮ್ ಕಾಲೊನಿಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಕೆಸರು ತುಂಬಿದೆ. ಬೈಕ್ ಸವಾರರು ಕೆಸರಿನಲ್ಲಿ ಆಯ ತಪ್ಪಿ ಜಾರಿ ಬಿದ್ದ ಉದಾಹರಣೆ ಇವೆ. ನಮ್ಮ ಸಮಸ್ಯೆಯನ್ನು ಆಲಿಸುವವರೆ ಇಲ್ಲದಂತಾಗಿದೆ,‌ ಅಧಿಕಾರಿಗಳಿಗೆ ತಿಳಿಸಿದರು ನಿರ್ಲಕ್ಷ್ಯ ತೋರಿದ್ದಾರೆ  ಎನ್ನುತ್ತಾರೆ ನಿವಾಸಿಗಳು. ‌

ಸಂಬಂದಪಟ್ಟ ಅಧಿಕಾರಿಗಳು ರಸ್ತೆ ಮೇಲೆ ಬಿದ್ದ ಮಣ್ಣನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಹಟ್ಟಿ ಕಂಪನಿ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಸಂಘಟನೆಯ ಮುಖಂಡ ನಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ನೆಲಕ್ಕೆ ಉರುಳಿದ ಭತ್ತ: ಗೌಡೂರು ಗ್ರಾಮದಲ್ಲಿ ಸುರಿದ‌ ಮಳೆಯಿಂದ ಭತ್ತ ನೆಲಕ್ಕೆ‌ ಉರುಳಿದೆ.

ರುದ್ರಗೌಡ ವೀರನಗೌಡ ಅವರಿಗೆ ಸೇರಿದ 2 ಎಕರೆ ಜಮೀನಿನಲ್ಲಿ ಬೆಳಯಲಾಗಿದ್ದ ಭತ್ತದ ಬೆಳೆಯು ನೆಲಕಚ್ವಿಗೆ ಇದರಿಂದ ರೈತರು ಕಂಗಾಲಾಗಿದ್ದಾರೆ ಸಂಬಂದಪಟ್ಟ ಅಧಿಕಾರಿಗಳು‌ ಸ್ಧಳಕ್ಕೆ ಭೇಟಿ ನೀಡಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಸವರಾಜ ಗೌಡೂರು ಒತ್ತಾಯ ಮಾಡಿದ್ದಾರೆ.

ಹಟ್ಟಿ ಚಿನ್ನದ ಗಣಿ ಪಟ್ಟಣದ ಗೌಡೂರು ಗ್ರಾಮದಲ್ಲಿ‌ ಮಳೆಗೆ ರೈತ‌ಬೆಳೆದ ಭತ್ತ ನೆಲಕಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.