ADVERTISEMENT

ಹಟ್ಟಿ ಚಿನ್ನದ ಗಣಿ: ಗಬ್ಬೆದ್ದು ನಾರುತ್ತಿದೆ ವಾರದ ಸಂತೆ ಬಜಾರ

ಅಮರೇಶ ನಾಯಕ
Published 27 ಅಕ್ಟೋಬರ್ 2025, 5:11 IST
Last Updated 27 ಅಕ್ಟೋಬರ್ 2025, 5:11 IST
ಹಟ್ಟಿ ಚಿನ್ನದ ಗಣಿ ಪಟ್ಟಣದ ವಾರದ ಸಂತೆ ಬಜಾರನಲ್ಲಿ ನಿಂತಿರುವ ಚರಂಡಿ ನೀರಿನಲ್ಲಿ ಕೆಸರಿನಲ್ಲಿ  ಸಿಲುಕಿರುವ ವಾಹನ
ಹಟ್ಟಿ ಚಿನ್ನದ ಗಣಿ ಪಟ್ಟಣದ ವಾರದ ಸಂತೆ ಬಜಾರನಲ್ಲಿ ನಿಂತಿರುವ ಚರಂಡಿ ನೀರಿನಲ್ಲಿ ಕೆಸರಿನಲ್ಲಿ  ಸಿಲುಕಿರುವ ವಾಹನ   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆ ಜಾಗ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಸಂತೆಯಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ವ್ಯಾಪಾರಸ್ಥರಿಗೆ ಕುಳಿತುಕೊಳ್ಳಲು ಅಸನಗಳು ಸೇರಿದಂತೆ ಇನ್ನಿತರ ಸೌಲಭ್ಯಗಳಿಲ್ಲ. ಹಳೆಯ ಬಸ್ ನಿಲ್ದಾಣದ ಪ್ರಮುಖ ರಸ್ತೆ ಬದಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತುಂಬ ತೊಂದರೆ ಆಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಪಟ್ಟಣ ನಿಗದಿಪಡಿಸಿದ ಪಂಚಾಯಿತಿ ಜಾಗದಲ್ಲಿ ವ್ಯಾಪಾರ ಮಾಡಬೇಕು. ಆದರೆ ರಸ್ತೆಯಲ್ಲಿ ವಹಿವಾಟು ನಡೆಸುವುದರಿಂದ ಸಂತೆ ದಿನ ವ್ಯಾಪಾರಿಗಳು ಮತ್ತು ಪಾದಚಾರಿಗಳ ಮಧ್ಯೆ ಜಗಳ ನಡೆದ ಉದಾಹರಣೆ ಕೂಡ ಇದೆ.

ADVERTISEMENT

ಶೌಚಾಲಯ, ಕುಡಿಯುವ ನೀರಿಗಾಗಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪರದಾಡುವಂತಾಗಿದೆ ಸೌಲಭ್ಯ ಕಲ್ಪಿಸಿಕೊಡಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಇತ್ತ ಕಡೆ ಸುಳಿಯುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಚರಂಡಿ ನೀರು ಸಂತೆಯ ಮೈದಾನದಲ್ಲಿ ಹರಿಯುತ್ತಿದ್ದು ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಅದರ ಮಧ್ಯದಲ್ಲಿಯೇ ವ್ಯಾಪರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮೈಬು, ವೆಂಕೋಬ, ವೀರೇಶ ಅಳಲು ತೋಡಿಕೊಂಡರು. ಮೂಲಸೌಕರ್ಯ ನೀಡಬೇಕಾದ ಪಟ್ಟಣ ಪಂಚಾಯಿತಿ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.

ಕರ ವಸೂಲಿ ಮಾತ್ರ ನಿರಂತರವಾಗಿ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾದ ಯಾವುದೇ ಸೌಲಭ್ಯಗಳನ್ನು ಪಂಚಾಯಿತಿ ಅಧಿಕಾರಿಗಳು ನೀಡುವುದಿಲ್ಲ ಎಂದು ವ್ಯಾಪಾರಸ್ಥರಾದ ಹುಸೇನ್ ಹೇಳುತ್ತಾರೆ.

ಸಂತೆ ಬಜಾರ ಹರಾಜು ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಮೂಲಸೌಕರ್ಯ ಒದಗಿಸಲು ಪ.ಪಂ ಆಡಳಿತ ಸಿದ್ಧವಿದೆ  
ಜಗನಾಥ ಪ.ಪಂ ಮುಖ್ಯಾಧಿಕಾರಿ‌ ಹಟ್ಟಿ
ಸಂತೆ ಬಜಾರ ಹರಾಜು ಪ್ರಕ್ರಿಯೆ ನಡೆಯದಂತೆ ಗುತ್ತಿಗೆದಾರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕಾನೂನಿನ ಪ್ರಕಾರ ಅವದಿ ಮುಗಿದಿದ್ದರೆ ಹೊಸ ಟೆಂಡರ್ ಮೂಲಕ ಹರಾಜು ನಡೆಸಲಿ 
ಶಿವಪ್ರಸಾದ ನಾಯಕ ಗ್ರಾ.ಪಂ‌ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.