ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸಮೀಪದ ಗೌಡೂರು ಗ್ರಾ.ಪಂ ವ್ಯಾಪ್ತಿಯ ಬರುವ ಹೊಸಗುಡ್ಡ ಗ್ರಾಮದ ನಿವಾಸಿ ಶಿವರಾಜ ನಾಯಕ (25) ವಿದ್ಯುತ್ ತಂತಿ ತಗುಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ.
ಮನೆಗೆ ಬಳಸಿದ್ದ ಸರ್ವಿಸ್ ವೈಯರ್ ತುಂಡಾಗಿ ಕೆಳಗೆ ಬಿದ್ದಿದೆ ಆಕಸ್ಮಿಕವಾಗಿ ತಂತಿ ತಗುಲಿ ಸ್ಧಳದಲ್ಲೇ ಸಾವನಪ್ಪಿದ್ದಾನೆ.
ಮೃತನಿಗೆ ಪತ್ನಿ, ಮೂರು ಜನ ಪುತ್ರಿಯರು ಇದ್ದಾರೆ. ತಾಯಿ ಅಂಪಮ್ಮ ದೂರಿನ ಅನ್ವಯ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.