ADVERTISEMENT

ಮಾನ್ವಿ ತಾಲ್ಲೂಕು ನಿರಂತರ ಮಳೆಗೆ ಸಂಚಾರ ಸ್ಥಗಿತ

ಹಳ್ಳದ ಸೇತುವೆಗಳು ಮುಳುಗಡೆ, ಜಲಾವೃತಗೊಂಡ ಜಮೀನು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:22 IST
Last Updated 27 ಸೆಪ್ಟೆಂಬರ್ 2019, 9:22 IST
ಮಾನ್ವಿ ತಾಲ್ಲೂಕಿನ ತುಪ್ಪದೂರು ಗ್ರಾಮದ ಬಳಿ ಮಳೆಗೆ ಹಾಳಾಗಿರುವ ಹಳ್ಳದ ಸೇತುವೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಗುರುವಾರ ವೀಕ್ಷಿಸಿದರು
ಮಾನ್ವಿ ತಾಲ್ಲೂಕಿನ ತುಪ್ಪದೂರು ಗ್ರಾಮದ ಬಳಿ ಮಳೆಗೆ ಹಾಳಾಗಿರುವ ಹಳ್ಳದ ಸೇತುವೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಗುರುವಾರ ವೀಕ್ಷಿಸಿದರು   

ಮಾನ್ವಿ: ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಗ್ರಾಮೀಣ ಭಾಗದ ಹಳ್ಳಿಗಳು ತಾಲ್ಲೂಕು ಕೇಂದ್ರದ ಸಂಪರ್ಕ ಕಡಿತಗೊಂಡಿವೆ. ತಾಲ್ಲೂಕಿನ ಗವಿಗಟ್‌ ಹಾಗೂ ಆಲ್ದಾಳ ಗ್ರಾಮಗಳ ನಡುವೆ ಇರುವ ಹಳ್ಳದ ಸೇತುವೆ ಮುಳುಗಡೆಯಾಗಿದ್ದು, ಸಾರಿಗೆ ಬಸ್‌ ಮತ್ತು ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಮಾನ್ವಿ–ಬಲ್ಲಟಗಿ ಮಾರ್ಗದ ಅನೇಕ ಕಡೆ ರಸ್ತೆ ಹಾಳಾಗಿದೆ. ಆಲ್ದಾಳ ಸಮೀಪದ ಜಮೀನುಗಳ ಗುರುವಾರ ಸಂಪೂರ್ಣ ಜಲಾವೃತ ಗೊಂಡಿರುವುದು ಕಂಡು ಬಂದಿತು. ಚೀಕಲಪರ್ವಿ ಗ್ರಾಮದ ಹೊರವಲಯದ ಜನತಾ ಕಾಲೊನಿ ಹಳ್ಳವೂ ಮುಳುಗಡೆಯಾಗಿದೆ. ಮುಷ್ಟೂರು ತಡಕಲ್‌, ಬಾಗಲ ವಾಡ ಮತ್ತಿತರ ಗ್ರಾಮಗಳ ಸಮೀಪದ ಹಳ್ಳಗಳು ತುಂಬಿ ಹರಿಯುತ್ತಿದ್ದು ಸೇತುವೆಗಳು ಮುಳುಗಡೆಯಾಗಿ ಸಂಚಾರ ಬಂದ್‌ ಆಗಿದೆ. ಇದರಿಂದಾಗಿ ತಾಲ್ಲೂಕು ಕೇಂದ್ರಕ್ಕೆ ಹೋಗುತ್ತಿದ್ದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT