ADVERTISEMENT

ರಾಯಚೂರು | ಬಿರುಗಾಳಿಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 6:05 IST
Last Updated 6 ಜೂನ್ 2022, 6:05 IST
ಮಸ್ಕಿ ಕಾಟಗಲ್ ರಸ್ತೆ ನಡುವೆ ಬಿದ್ದ ಮರಗಳು
ಮಸ್ಕಿ ಕಾಟಗಲ್ ರಸ್ತೆ ನಡುವೆ ಬಿದ್ದ ಮರಗಳು   

ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಂಕುಶದೊಡ್ಡಿ ಗ್ರಾಮದ ಬಳಿ ಲಿಂಗಸುಗೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಮರವೊಂದು ರಾತ್ರಿ ಉರುಳಿದ್ದರಿಂದ ವಾಹನಗಳ‌ ಸಂಚಾರ ಎರಡು ತಾಸು‌ಸ್ಥಗಿತಗೊಂಡಿತ್ತು.

ಮಾರಲದಿನ್ನಿ ರಸ್ತೆಯ ಕಾಟಗಲ್ ಬಳಿ ಮರ ಉರುಳಿ ಬಿದ್ದ ಕಾರಣ ಈ ಮಾರ್ಗದ ರಸ್ತೆ ಬಂದಾಗಿತ್ತು. ಲಿಂಗಸುಗೂರು ರಸ್ತೆಯ ಮುದಬಾಳ ಕ್ರಾಸ್ ಬಳಿ ಇದ್ದ ಹಲವಾರು ಅಂಗಡಿಗಳ ತಗಡುಗಳು ಗಾಳಿಗೆ ಹಾರಿ ಹೋಗಿವೆ.

ಮಸ್ಕಿ ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಇದರಿಂದ ಇಡೀ ರಾತ್ರಿ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.‌ ಜೆಸ್ಕಾಂ ಸಿಬ್ಬಂದಿ ರಾತ್ರಿಯಿಡಿ ಕೆಲಸ ಮಾಡಿ ವಿದ್ಯುತ್ ಲೈನ್ ದುರಸ್ತಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.