ADVERTISEMENT

ರಾಯಚೂರು: ಕೇಂದ್ರ ತಂಡದಿಂದ ಮನೆಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:02 IST
Last Updated 19 ಅಕ್ಟೋಬರ್ 2025, 6:02 IST
ಮುದಗಲ್ ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿಗೆ ಮಂಜೂರಾದ 200 ಮನೆಗಳನ್ನ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಸಹಾಯಕ ಪ್ರಧಾನ ವ್ಯವಸ್ಥಾಪಕ ಉಸ್ಮಾನ್ ಪಾಷಾ ಅವರ ತಂಡ ಪರಿಶೀಲನೆ ನಡೆಸಿತು
ಮುದಗಲ್ ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿಗೆ ಮಂಜೂರಾದ 200 ಮನೆಗಳನ್ನ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಸಹಾಯಕ ಪ್ರಧಾನ ವ್ಯವಸ್ಥಾಪಕ ಉಸ್ಮಾನ್ ಪಾಷಾ ಅವರ ತಂಡ ಪರಿಶೀಲನೆ ನಡೆಸಿತು   

ಮುದಗಲ್: ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿನ 2024-25ನೇ ಸಾಲಿನಲ್ಲಿ ಮಂಜೂರಾದ ಡಾ.ಅಂಬೇಡ್ಕರ್‌ ವಸತಿ ಯೋಜನೆ 100 ಹಾಗೂ ಬಸವ ವಸತಿ ಯೋಜನೆಯಡಿ 100 ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಕಾ.ಅ) ಉಸ್ಮಾನ್ ಪಾಷಾ ಪರಿಶೀಲಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ, ದಾಖಲೆ ಪರಿಶೀಲಿಸಿರು. ಯರದೊಡ್ಡಿ, ಯರದೊಡ್ಡಿ ತಾಂಡಾ, ಹಡಗಲಿ ತಾಂಡಾ, ಸೊಂಪುರ ತಾಂಡಾ, ಹಡಗಲಿ ಗ್ರಾಮಗಳಲ್ಲಿ ಫಲಾನುಭವಿಗಳ ಮನೆ, ಮನೆ ಕಟ್ಟಡದ ಬೆಸಮೆಂಟ್, ಖಾಲಿ ಜಾಗ ಪರಿಶೀಲಿಸಿದರು.

‘ಮನೆಗಳು ಮಂಜೂರಾಗಿ 2-3 ತಿಂಗಳಗತಿಸಿವೆ, ಪಂಚಾಯಿತಿ ಮಂಜೂರಿ ಪತ್ರ ನೀಡಿದ್ದರಿಂದ ಹರಕು-ಮರಕು ಗುಡಿಸಲು, ಹಳೆಯ ಮನೆಗಳನ್ನು ತೆರವುಗೊಳಿಸಿ, ಬುನಾದಿ ಮಾಡಿಕೊಂಡಿದ್ದೆವು. 3 ತಿಂಗಳ ಗತಿಸಿದರೂ ಮನೆ ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಮನೆ ಕಟ್ಟುವುದನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಫಲಾನುಭವಿ ಶಾರದಮ್ಮ ಹೇಳಿದರು.

ADVERTISEMENT

‘ಆರ್‌ಜಿಎಚ್‌ಎಲ್ ನಿಯಮದಂತೆ ವಾರ್ಡ್ ಸಭೆ, ಗ್ರಾಮಸಭೆ, ಸಾಮಾನ್ಯ ಸಭೆ ನಡೆಸಿ ಮನೆ ಮಂಜೂರುಗೊಳಿಸಿದ್ದೇವೆ’ ಎಂದು ಪಂಚಾಯಿತಿ ಸದಸ್ಯ ದುರುಗಪ್ಪ ಕಟ್ಟಿಮನಿ, ಹನುಮಂತ ಗಂಟಿ, ಮಾನಸಿಂಗ್, ಪಾಂಡುರಂಗ, ಮೌನೇಶ ಭೋಗಾಪುರ, ಮಲ್ಲಮ್ಮ, ಚನ್ನಮ್ಮ ಅಧಿಕಾರಿಗಳ ಗಮನಕ್ಕೆ ತಂದರು.

ವಸತಿ ನಿಗಮದ ಕಿರಿಯ ಸಾಹಯಕ ಜಯಂತಿ ಪಿ., ಪಿಡಿಒ ಜ್ಯೋತಿಬಾಯಿ, ಮಹಿಬೂಬಸಾಬ, ಮಸ್ಕಿ ತಾ.ಪಂ ವಸತಿ ನಿಗಮದ ನೋಡಲ್ ಅಧಿಕಾರಿ ರಸೂಲಸಾಬ್‌ ಗೋನಾಳ, ಲಿಂಗಸುಗೂರು ನೋಡಲ್ ಅಧಿಕಾರಿ ಎಂ.ಡಿ. ರಸೂಲ, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.