ಮಸ್ಕಿ: ರಂಜಾನ್ ಪ್ರಯುಕ್ತ ಪಟ್ಟಣದ ಜಾಮಿಯಾ ಮಸೀದಿ ಬಳಿ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಮುಸ್ಲಿಂ ಸಮಾಜದವರಿಗೆ ಇಫ್ತಾರ್ ಕೂಟ ಏರ್ಪ ಡಿಸಿದ್ದರು.
ಸಂಜೆ ಮುಸ್ಲಿಮರಿಗೆ ಉಪಾಹಾರ ಬಡಿಸುವ ಮೂಲಕ ರಂಜಾನ್ ಶುಭಾಶಯ ವಿನಿಮಯ ಮಾಡಿಕೊಂಡರು. ಮುಸ್ಲಿಮ ಸಮಾಜದವರು ಶಾಸಕರನ್ನು ಸನ್ಮಾನಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಹಬೂಬಸಾಬ ಮುದ್ದಾಪುರ, ಮುಸ್ಲಿಂ ಸಮಾಜದ ಮುಖಂಡರಾದ ಜಿಲಾನಿ ಖಾಜಿ, ಅಬ್ದುಲ್ ಆಜೀಜ್, ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಮೊಹಮ್ಮದ್ ಸಾಬ್, ಅಬ್ದುಲ್ ಗನಿಸಾಬ್, ರಿಯಾಜ್ ಖಾಜಿ, ಶಬ್ಬೀರ್ ಸಾಬ್, ಎಂ.ಅಮರೇಶ, ಸಿದ್ದನಗೌಡ ಮಾಟೂರು, ಬಸ್ಸಪ್ಪ ಬ್ಯಾಳಿ, ನಿರುಪಾದೆಪ್ಪ ವಕೀಲ ದೊಡ್ಡಪ್ಪ ಕಡಬೂರ, ದೊಡ್ಡ ಕರಿಯಪ್ಪ, ಮಲ್ಲಯ್ಯ ಬಳ್ಳಾ, ಹನುಮಂತಪ್ಪ ವೆಂಕಟಾಪುರ, ಬಸನಗೌಡ ಪೊಲೀಸ್ ಪಾಟೀಲ, ಕೃಷ್ಣ ಡಿ.ಚಿಗರಿ, ಶಿವು ಬ್ಯಾಳಿ, ಸುರೇಶ ಅಂತರಗಂಗಿ, ಶಿವರೆಡ್ಡಿ, ಪುರಸಭೆ ಸದಸ್ಯರು ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.