ADVERTISEMENT

ರಾಯಚೂರು | ರೈತನ ಮಗ ರಾಜು 'ಐಐಟಿ'ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:47 IST
Last Updated 9 ಆಗಸ್ಟ್ 2025, 6:47 IST
ರಾಜು ನಾಯಕ 
ರಾಜು ನಾಯಕ    

ಜಾಲಹಳ್ಳಿ: ಸ್ಥಳೀಯ ನಿವಾಸಿ ಕೃಷಿಕ ತಿಮ್ಮಣ್ಣ ನಾಯಕ ಕಂಬಾರ ಅವರ ಮಗ ರಾಜು ಪ್ರಸಕ್ತ ವರ್ಷದಲ್ಲಿ ತಮಿಳುನಾಡಿನ ಚೆನೈ ಅಖಿಲ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.

ರಾಜು ಅವರು ದಾವಣಿಗೇರಾ ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಅವರು, ನೀಟ್ ಪರೀಕ್ಷೆ ಬರೆದು ಗುಲಬರ್ಗಾ ವೈದ್ಯಕೀಯ ಕಾಲೇಜು (ಜಿಮ್ಸ್) ಎಂಬಿಬಿಎಸ್‌ಗೆ ಆಯ್ಕೆಯಾಗಿದ್ದಾರೆ. ಆದರೂ ನಂತರದಲ್ಲಿ ಚೆನ್ನೈನ ಐಐಟಿಗೆ ಆಯ್ಕೆಯಾಗಿ ಡಾಟಾ ಸೈನ್ಸ್ ಮತ್ತು ಆರ್ಟಿಫಿಷಿಯಲ್‌ ಇಂಟಲಿಜೆನ್ಸ್ ಕೋರ್ಸ್ ಅಧ್ಯಯನಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.

ತಿಮ್ಮಣ್ಣ ನಾಯಕ ಕಂಬಾರ ಗ್ರಾಮದಲ್ಲಿ ಸಣ್ಣ ರೈತನಾಗಿದ್ದು ಅವರ ಮಗ ರಾಜು ಐಐಟಿಗೆ ಪ್ರವೇಶ ಪಡೆದು ಜಾಲಹಳ್ಳಿ ಗ್ರಾಮ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.