ADVERTISEMENT

ಜೀವನಶೈಲಿಯಿಂದ ಕುಗ್ಗಿದ ರೋಗ ನಿರೋಧಕ ಶಕ್ತಿ: ಡಾ. ಉದಯಕುಮಾರ

ಆರೋಗ್ಯವರ್ಧಕ ಆಹಾರಗಳ ತಯಾರಿಕಾ ತಂತ್ರಜ್ಞಾನ ಜಾಗೃತಿ, ತರಬೇತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 13:22 IST
Last Updated 18 ಮಾರ್ಚ್ 2022, 13:22 IST
ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ಎರಡು ದಿನಗಳ ತರಬೇತಿಯನ್ನು ಸ್ಥ ಡಾ. ಉದಯಕುಮಾರ ನಿಡೋಣಿ ಗುರುವಾರ ಉದ್ಘಾಟಿಸಿದರು
ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನದ ಎರಡು ದಿನಗಳ ತರಬೇತಿಯನ್ನು ಸ್ಥ ಡಾ. ಉದಯಕುಮಾರ ನಿಡೋಣಿ ಗುರುವಾರ ಉದ್ಘಾಟಿಸಿದರು   

ರಾಯಚೂರು: ಆಧುನಿಕ ಜೀವನ ಶೈಲಿಯಿಂದ ಮನುಷ್ಯರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ ನಿಡೋಣಿ ಅವರು ತರಬೇತಿ ಉದ್ಘಾಟಿಸಿ ಮಾತನಾಡಿದರು.

ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದ, ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ) ಅಡಿಯಲ್ಲಿ ಹಾಗೂ ರಾಯಚೂರು ಕೃಷಿ ವಿಜ್ಞಾನ ಕೇಂದ್ರದಿಂದ “ಕೃಷಿ ವಿಜ್ಞಾನ ಕೇಂದ್ರದಲ್ಲಿಗುರುವಾರ ಏರ್ಪಡಿಸಿದ್ದ ‘ಕೋವಿಡ್ ವೈರಾಣುವಿನ ದುಷ್ಪರಿಣಾಮಗಳನ್ನು ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯವರ್ಧಕ ಆಹಾರಗಳ ತಯಾರಿಕಾ ತಂತ್ರಜ್ಞಾನಗಳ ಕುರಿತು ಜಾಗೃತಿ ಹಾಗೂ ತರಬೇತಿ‘ ಉದ್ಘಾಟಿಸಿ ಮಾತನಾಡಿದರು

ಕೋವಿಡ್-19 ನಿಂದಾಗಿ ಸಾಮಾಜಿಕವಾಗಿ ಹಾಗೂ ಮನುಷ್ಯರ ದೈನಂದಿನ ಜೀವನದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಊಟದಲ್ಲಿ ಸಿರಿಧಾನ್ಯಗಳು, ಹಸಿ ತರಕಾರಿಗಳು ಹಾಗೂ ಪೌಷ್ಟಿಕಾಂಶ ಇರುವಂತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಭಾರತದಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಪದ್ಧತಿಗಳನ್ನು ಹಿರಿಯರು ರೂಢಿಸಿಕೊಂಡು ಬಂದಿದ್ದಾರೆ. ನಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ, ಸಂಸ್ಕರಣೆ ಮಾಡಿ ವ್ಯಾಪಾರ ವಹಿವಾಟು ಮಾಡಲು ಸರ್ಕಾರದಿಂದ ಸಹಾಯಧನ ಹಾಗೂ ಸಬ್ಸಿಡಿ ದೊರೆಯುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಮ್ಮ ಆಹಾರ ಪದ್ಧತಿ ಪೌಷ್ಟಿಶದಿಂದ ಕೂಡಿರಬೇಕು. ಯಾವ ದೇಶದ ನಾಗರೀಕರು ಆರೋಗ್ಯ ಸದೃಢವಾಗಿರುತ್ತದೆ. ಅ ದೇಶವು ಪ್ರಬಲ ದೇಶವಾಗಿರುತ್ತದೆ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಿ ಡಾ. ಪ್ರಹ್ಲಾದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಅತಿಹೆಚ್ಚು ಜಂಕ್ ಪುಡ್‌ಗಳಿಗೆ ಮಾರುಹೋಗುತ್ತಿದ್ದಾರೆ. ಅಸಮತೋಲನ ಆಹಾರದಿಂದ ದೇಹದ ಆರೋಗ್ಯ ಕೆಟ್ಟಿದೆ ದೇಹದಲ್ಲಿ ಯಾವುದೇ ವಿಟಮಿನಗಳ ಕೊರತೆ ಇಲ್ಲದಂತೆ ನೋಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.

ಆಹಾರ ಸಂಸ್ಕರಣೆ ಮತ್ತು ತಂತ್ರಜ್ಞಾನ ವಿಭಾಗದ ವಿಜ್ಞಾನಿ ವೀಣಾ ಟಿ., ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ರೂಪಬಾಯಿ,ಸುಧಾದೇವಿ, ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್. ಮಾತನಾಡಿದರು.

ತೋಟಗಾರಿಕೆ ವಿಜ್ಞಾನಿ ಹೇಮಲತಾ ಕೆ.ಜೆ. ಸ್ವಾಗತಿಸಿದರು. ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯಕುಮಾರ ನಿಡೋಣಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಹ್ಲಾದ ಉದ್ಘಾಟನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.